ಕೋಲ್ಕತ್ತಾ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯೋದೇ ವಿರೋಧ ಪಕ್ಷಗಳ ಗುರಿಯಾಗಬೇಕು ಎಂದು ತೃಣಮೂಲ ಕಾಂಗ್ರೆಸ್ ಅಧಿನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪುನರುಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರ ಯೋಜನೆಗಳ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಧರಣಿ ನಡೆಸುತ್ತಿರುವ ಮಮತಾ, ವಿರೋಧ ಪಕ್ಷಗಳು ಈಗಲೇ ನಾಯಕರ ನೇಮಕ ಮಾಡುವುದು ಬೇಕಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಅದೇ ಈಗಿನ ಪ್ರಮುಖ ಉದ್ದೇಶ. ಅದು ಬಿಟ್ಟು ವಿಪಕ್ಷಳ ನಾಯಕನ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತಾದಲ್ಲಿ ಕೇಂದ್ರ ಸರಕಾರ ತಾರತಮ್ಯ ಧೋರಣೆ ಮಾಡುತ್ತಿದೆ ಎಂದುಎರಡು ದಿನಗಳ ಧರಣಿಯನ್ನು ಪ್ರಾರಂಭಿಸಿದ್ದು, ಅಗತ್ಯಬಿದ್ದರೆ ಪ್ರಧಾನಿಯವರ ಮನೆಯ ಹೊರಗೆ ಧರಣಿ ನಡೆಸುತ್ತೇನೆ ಎಂದು ಹೇಳಿದ್ದರು.
ಬಿಜೆಪಿ’ ಹೆಸರಿನ ವಾಷಿಂಗ್ ಮೆಷಿನ್‌ನಲ್ಲಿ ಮಮತಾ ಬ್ಯಾನರ್ಜಿ ಕಪ್ಪು ಬಟ್ಟೆ ಹಾಕಿದರು. ಕೇಸರಿ ಪಾಳಯಕ್ಕೆ ಸೇರಿದ ಭ್ರಷ್ಟ ನಾಯಕರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು. ಕೇಸರಿ ಪಕ್ಷವನ್ನು ಎಲ್ಲಾ ಧರ್ಮಗಳ ಜನರು ಒಂದಾಗಬೇಕು ಎಂದು ಹೇಳಿದ್ದರು.