Friday, September 29, 2023
spot_img
- Advertisement -spot_img

ಬಿಜೆಪಿ ಸಚಿವರ ಮೇಲೆ ಅರಿಶಿನ ಪುಡಿ ಎರಚಿ ಹೈಡ್ರಾಮಾ!

ಮುಂಬೈ: ಮಹಾರಾಷ್ಟ್ರ ಸರ್ಕಾರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಮೇಲೆ ಅರಿಶಿನ ಪುಡಿ ಎರಚಿರುವ ಘಟನೆ ನಡೆದಿದೆ. ಮೀಸಲಾತಿಗೆ ಒತ್ತಾಯಿಸಿ ಮನವಿ ಸಲ್ಲಿಸಲು ಮುಖಂಡರು ಅವರನ್ನು ಭೇಟಿಯಾದಾಗ ಈ ಘಟನೆ ನಡೆದಿದೆ.

ಕುರುಬ ಸಮುದಾಯದ ಇಬ್ಬರು ಸಚಿವರ ಮೇಲೆ ಅರಿಶಿನ ಪುಡಿ ಎರಚಿದ್ದಾರೆ. ಸಮುದಾಯಕ್ಕೆ ಸೇರಿದ್ದ ವ್ಯಕ್ತಿಗಳು ತಂದಿದ್ದ ಮನವಿ ಪತ್ರವನ್ನು ಓದುತ್ತಿದ್ದ ಸಚಿವರ ಮೇಲೆ ಓರ್ವ ಏಕಾಏಕಿ ಅರಿಶಿನ ಪುಡಿ ಅವರ ತಲೆಯ ಮೇಲೆ ಹಾಕಿದ್ದಾನೆ. ಈ ವೇಳೆ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿ ಆತನ ತಡೆದು ಎಳೆದೊಯ್ದಿದ್ದಾರೆ.

ಇದನ್ನೂ ಓದಿ: G20 ಸಭೆಗಾಗಿ ಭಾರತಕ್ಕೆ ಬಂದಿಳಿದ ಅಮೇರಿಕಾ ಅಧ್ಯಕ್ಷ

ಈ ಘಟನೆಯಿಂದ ಕೆಲ ಕಾಲ ಸ್ಥಳದಲ್ಲಿ ತಳ್ಳಾಟ ನಡೆದು ಗೊಂದಲ ಏರ್ಪಟ್ಟಿತ್ತು. ಬಳಿಕ ಪೊಲೀಸರು ಆಗಮಿಸಿ ಸ್ಥಳದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಿದರು.

ಅರಿಶಿನ ಪುಡಿ ಎರಚಿದ ವ್ಯಕ್ತಿಯನ್ನು ಶೇಖರ್ ಬಂಗಲೆ ಎಂದು ಗುರುತಿಸಲಾಗಿದೆ. ಬಳಿಕ ಮಾತನಾಡಿದ ಆತ, ತನ್ನ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ರೀತಿ ಮಾಡಿದ್ದೇನೆ. ಧನಗರ್ ಸಮುದಾಯವನ್ನು ಪರಿಶಿಷ್ಟ ಪಂಗಡದ (ಎಸ್‌ಟಿ) ವರ್ಗದಡಿ ಮೀಸಲಾತಿ ಬೇಡಿಕೆ ಇಟ್ಟಿದ್ದೇವೆ. ಬೇಡಿಕೆಯನ್ನು ಶೀಘ್ರವಾಗಿ ಈಡೇರಿಸದಿದ್ದರೆ ಮುಖ್ಯಮಂತ್ರಿ ಅಥವಾ ಇತರ ರಾಜ್ಯ ಸಚಿವರ ಮೇಲೂ ಕಪ್ಪು ಬಣ್ಣ ಎರಚುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ‘ಇಂಡಿಯಾ’ ಹೆಸರು ಮರುನಾಮಕರಣಕ್ಕೆ ಮನವಿ ಬಂದರೆ ಪರಿಗಣಿಸುತ್ತೇವೆ; ಯುಎನ್ ವಕ್ತಾರ

ಘಟನೆ ಬಳಿಕ ಪ್ರತಿಕ್ರಿಯಿಸಿದ ಸಚಿವ ಪಾಟೀಲ್, ಧಾರ್ಮಿಕ ಆಚರಣೆಗಳಲ್ಲಿ ಅರಿಶಿನವನ್ನು ಪವಿತ್ರವೆಂದು ಪರಿಗಣಿಸುವುದರಿಂದ ನಾನಿದನ್ನು ತಪ್ಪಾಗಿ ಅರ್ಥೈಸಿಲ್ಲ. ಅವರ ವಿರುದ್ಧ ಯಾವುದೇ ಕ್ರಮಕ್ಕೆ ನಾನು ಆಗ್ರಹಿಸಲ್ಲ. ಆದ್ರೆ ನಮ್ಮ ಕಾರ್ಯಕರ್ತರು ಅವರಿಗೆ ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಆ ಕ್ಷಣ ನನ್ನ ಗಮನಕ್ಕೆ ಬಂದಿದ್ದರೆ ತಡೆಯುತ್ತಿದೆ ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles