ಮಂಡ್ಯ: ಮದ್ದೂರಿನಲ್ಲಿ ಮೂವರು ರೌಡಿಶೀಟರ್‌ಗಳು ಜೆಡಿಎಸ್‌ಗೆ ಸೇರ್ಪಡೆ ಆಗಿದ್ದಾರೆ. ಈಗ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರಿಂದ ಜೆಡಿಎಸ್ ಪಕ್ಷ ಟವೆಲ್‌ನ್ನು ಹೊದಿಸಿಕೊಳ್ಳುವ ಮೂಲಕ ಮೂವರು ರೌಡಿಶೀಟರ್‌ಗಳು ಅಧಿಕೃತವಾಗಿ ರಾಜಕಾರಣಕ್ಕೆ ಪ್ರವೇಶ ಮಾಡಿದ್ದಾರೆ.
ಪ್ರಶಾಂತ್ @ಕುಳ್ಳಿ, ವರುಣ್@ ಚೊತ್ತ ಹಾಗೂ ನಿತಿನ್ ಜೆಡಿಎಸ್ ಸೇರಿದ ರೌಡಿಶೀಟರ್‌ಗಳು ಆಗಿದ್ದಾರೆ. ಇವರೊಂದಿಗೆ ರೌಡಿಶೀಟರ್‌ಗಳ ನೂರಾರು ಸಹಚರರು, ವಿವಿಧ ಪಕ್ಷಗಳಲ್ಲಿ ಕೆಲಸ ಮಾಡಿದ್ದ ಕಾರ್ಯಕರ್ತರು ಹಾಗೂ ಹೊಸ ಯವಕರು ಸೇರಿದಂತೆ ಹಲವರು ಜೆಡಿಎಸ್ ಸೇರಿದ್ದಾರೆ.
ಮಂಡ್ಯ ಜಿಲ್ಲೆ ಸೇರಿದಂತೆ ಬೆಂಗಳೂರು, ಮೈಸೂರು ಹಾಗೂ ರಾಜ್ಯದ ವಿವಿಧೆಡೆ ಕೊಲೆ, ಗಲಭೆಗಳು ಹಾಗೂ ಆಫ್ ಮರ್ಡರ್ ಪ್ರಕರಣಗಳಲ್ಲಿ ಜೆಇಎಸ್ ಪಕ್ಷ ಸೇರ್ಪಡೆ ಆಗಿರುವ ರೌಡಿಶೀಟರ್‌ಗಳು ಭಾಗಿಯಾಗಿದ್ದಾರೆ. ಇನ್ನು ಜೆಡಿಎಸ್ ಸೇರ್ಪಡೆ ಆಗಿರುವ ರೌಡಿಶೀಟರ್ಗಳ ಮೇಲೆ ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಇವೆ ಎಂದುತಿಳಿದುಬಂದಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ರೌಡಿಗಳ ರಾಜಕೀಯ ಎಂಟ್ರಿ ಶುರುವಾಗುತ್ತದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸ್ಯಾಂಟ್ರೋ ರವಿ ಮತ್ತು ಮಂಡ್ಯದ ಫೈಟರ್ ರವಿ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದ ವಿಚಾರ ಸುದ್ದಿಯಾಗಿತ್ತು.