Sunday, September 24, 2023
spot_img
- Advertisement -spot_img

ಮಂಗಳೂರು ವಿವಿ ಗಣೇಶೋತ್ಸವ ವಿವಾದ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಏನಂದ್ರು?

ಮಂಗಳೂರು: ‘ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗಣೇಶ ಉತ್ಸವ ನಡೆಸುವ ವಿಚಾರದಲ್ಲಿ ಹಸ್ತಕ್ಷೇಪ ಮಾಡಲ್ಲ; ಅದಕ್ಕೆ ಕುಲಪತಿ ಇದ್ದಾರೆ. ವಿವಿ ಆವರಣದಲ್ಲಿ ಕಳೆದ 40 ವರ್ಷಗಳಿಂದ ಗಣೇಶೋತ್ಸವ ಆಚರಿಸ್ತಾ ಇದ್ದಾರೆ, ಈಗ ಯಾಕೆ ವಿವಾದ ಮಾಡ್ತಾ ಇದ್ದಾರೆ ಎಂದು ಅರ್ಥ ಆಗ್ತಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಈ ಬಗ್ಗೆ ನಗರದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ‘ಮಂಗಳೂರು ವಿವಿ ‘ಬಿ’ ಗ್ರೇಡ್ ಗೆ ಹೋಗಿದೆ, ಅದನ್ನ ಹೆಚ್ಚಿಸಲು ಯೋಚನೆ ಮಾಡಬೇಕಿದೆ. ‘ಎ’ ಗ್ರೇಡ್ ಮಾಡುವ ಬಗ್ಗೆ ನಾವು ಮೊದಲು ಯೋಚನೆ ಮಾಡಬೇಕು. ಮಂಗಳೂರು ವಿವಿ ಸ್ವಾಯತ್ತ ಸಂಸ್ಥೆ, ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡೋದು ಸರಿಯಲ್ಲ. ಹೊರಗಿನವರು ಏನು ಹೇಳ್ತಾರೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ’ ಎಂದರು.

ಇದನ್ನೂ ಓದಿ; ಖಾಸಗಿ ಸಾರಿಗೆ ಸಂಘಟನೆಗಳ ಬೇಡಿಕೆ ಈಡೇರಿಸುತ್ತೇವೆ; ಸಚಿವ ರಾಮಲಿಂಗಾ ರೆಡ್ಡಿ

‘ಯೂನಿವರ್ಸಿಟಿ ಉಪ ಕುಲಪತಿ ಹಾಗೂ ರಾಜ್ಯಪಾಲರು ತೀರ್ಮಾನ ಮಾಡ್ತಾರೆ. ಕಲ್ಲಡ್ಕ ಪ್ರಭಾಕರ ಭಟ್ ಏನ್ ಮಾತನಾಡ್ತಾರೆ ಅನ್ನೋದು ನಮಗೆ ಮುಖ್ಯವಲ್ಲ. ವಿವಿ ಚೆನ್ನಾಗಿ ಅಭಿವೃದ್ಧಿಯಾಗಬೇಕು, ಅದರ ಬಗ್ಗೆ ಚರ್ಚೆಯಾಗಲಿ. ವಿವಿಯ ಆಂತರಿಕ ವಿಚಾರಕ್ಕೆ ಹೊರಗಿನವರು ಅನಾವಶ್ಯಕವಾಗಿ ಯಾಕೆ ಕೈ ಹಾಕಬೇಕು? ನಾವು ಇದರಲ್ಲಿ ಹಸ್ತಕ್ಷೇಪ ಮಾಡಲ್ಲ, ಅದಕ್ಕೆ ಕುಲಪತಿ ಇದ್ದಾರೆ’ ಎಂದು ಹೇಳಿದರು.

‘ವಿವಿಯಲ್ಲಿ ಕಳೆದ 40 ವರ್ಷಗಳಿಂದ ಗಣೇಶೋತ್ಸವ ಆಚರಿಸ್ತಾ ಇದ್ದಾರೆ. ಈಗ ಯಾಕೆ ವಿವಾದ ಮಾಡ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ವಿವಿಯ ಹಣ ಸಾರ್ವಜನಿಕರದ್ದು, ಅದು ಶಿಕ್ಷಣಕ್ಕೆ ಬಳಕೆ ಆಗಬೇಕು. ಕೆಲವರಿಗೆ ಸಂಬಳ, ಪೆನ್ಶನ್ ಕೊಟ್ಟಿಲ್ಲ, ಅದೆಲ್ಲಾ ಮೊದಲು ಸರಿಯಾಗಲಿ. ಹಬ್ಬ ಆಚರಣೆ ವಿವಿಯ ವಿವೇಚನೆಗೆ ಬಿಟ್ಟ ವಿಚಾರ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಆ ಬಗ್ಗೆ ತೀರ್ಮಾನ ಮಾಡ್ತಾರೆ. ಗೊಂದಲ ಸೃಷ್ಟಿಸುವುದು ಸರಿಯಲ್ಲ. ಶಾಂತಿ ಸಾಮರಸ್ಯ ಮುಖ್ಯ, ಚುನಾವಣೆ ಹತ್ತಿರ ಬರುವಾಗ ಅಶಾಂತಿ ಸೃಷ್ಟಿ ಸರಿಯಲ್ಲ, ಇದನ್ನ ಜಿಲ್ಲೆಯ ಜನತೆ ಸೂಕ್ಷ್ಮವಾಗಿ ಗಮನಿಸ್ತಾರೆ’ ಎಂದು ಸಚಿವರು ಹೇಳಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles