ಕಲಬುರಗಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಂಧಿಸಿ ಬಳಿಕ ಷರತ್ತಿನ ಮೇಲೆ ಠಾಣಾ ಜಾಮೀನು ನೀಡಲಾಗಿತ್ತು.
ಬಿಡುಗಡೆಯಾದ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಎಸ್‌ಪಿ ಇಶಾ ಪಂಥ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದಲ್ಲದೆ ಸುಳ್ಳು ಆರೋಪಗಳ ಮಾಡಿದ್ದ ಹಿನ್ನೆಲೆ ಮತ್ತೆ ಬಂಧಿಸಲಾಗಿದೆ. ಪೊಲೀಸ್ ಇಲಾಖೆಯಿಂದ ವಿಧಿಸಲಾದ ಮಾನದಂಡಗಳ ಉಲ್ಲಂಘನೆ ಮಾಡಿದ್ದರಿಂದ ಮತ್ತೆ ಮಣಿಕಂಠ ರಾಠೋಡ ಬಂಧನವಾಗಿದೆ.
ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಇಳಿದ ಸ್ಥಳ ಶಿವಶಕ್ತಿ ಕೇಂದ್ರ : ಪ್ರಧಾನಿ ಘೋಷಣೆ
ಐಪಿಸಿ ಸೆಕ್ಷನ್ 153A ಹಾಗೂ155(1)B ಅಡಿಯಲ್ಲಿ ಚಿತ್ತಾಪುರ ತಾಲೂಕಿನ ಮಾಡಬುಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.