ನವದೆಹಲಿ: ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ರನ್ನು ರೋಸ್ ಅವೆನ್ಯೂ ನ್ಯಾಯಾಲಯ 7 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ.
ನ್ಯಾಯಾಂಗ ಬಂಧನದಲ್ಲಿದ್ದ ಮನೀಶ್ ಸಿಸೋಡಿಯಾ ಅವರನ್ನು ಗುರುವಾರ ಇ.ಡಿ ಜೈಲಿನಿಂದಲೇ ಬಂಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನ್ಯಾಯಾಲಯದಿಂದ ಸೀಸೋಡಿಯಾ ಜಾಮೀನು ಕೋರಿರುವ ಮಧ್ಯೆಯೇ ಮತ್ತೆ ಬಂಧನವಾಗಿದೆ.
ಇ.ಡಿ ವಕೀಲರ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ ಸಿಸೋಡಿಯಾರನ್ನು 7 ದಿನಗಳ ಕಾಲ ಇ.ಡಿ ವಶಕ್ಕೆ ನೀಡಿ ಆದೇಶಿಸಿದೆ. ಈ ಮಧ್ಯೆ, ಸಿಬಿಐ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಿಸೋಡಿಯಾ ವಿರುದ್ಧದ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 21ಕ್ಕೆ ನಿಗದಿಪಡಿಸಿದೆ.
ಇಂದು ನ್ಯಾಯಾಂಗ ವಶದ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಸಿಸೋಡಿಯಾ ಅವರನ್ನು ತಿಹಾರ್ ಜೈಲಿನಲ್ಲಿ ರೂಸ್ ಅವೆನ್ಯೂ ಕೋರ್ಟ್ ಗೆ ಇಂದು ಮಧ್ಯಾಹ್ನ 2 ಗಂಟೆಗೆ ಹಾಜರುಪಡಿಸಲಾಯಿತು. ಕಾರ್ಯಾ ಚರಣೆಯ ವಿಧಾನಗಳನ್ನು ಗುರುತಿಸಲು ಮತ್ತು ಸಮನ್ಸ್ ಪಡೆದ ಇತರ ವ್ಯಕ್ತಿಗಳನ್ನು ಎದುರಿಸಲು ಮನೀಶ್ ಸಿಸೋಡಿಯಾರನ್ನು ವಿಚಾರಣೆಗೆ ಒಳಪಡಿಸಲು 10 ದಿನ ಕಸ್ಟಡಿಗೆ ನೀಡಲು ಅಧಿಕಾರಿಗಳು ಕೇಳಿದ್ದರು.
ಅಂತೆಯೇ ಮನೀಶ್ ಸಿಸೋಡಿಯಾ ಇತರರ ಹೆಸರಿನಲ್ಲಿ ಸಿಮ್ ಕಾರ್ಡ್, ಮೊಬೈಲ್ ಖರೀದಿಸಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿತ್ತು.