ನವದೆಹಲಿ: ಸಿಬಿಐ ಕಸ್ಟಡಿಯಲ್ಲಿರುವ ಸಿಸೋಡಿಯಾ ಆಮ್ ಆದ್ಮಿ ಪಕ್ಷದ ನಾಯಕನಿಗೆ ಪತ್ರ ಬರೆದಿದ್ದಾರೆ.”ವಿರೋಧಿಗಳ ಗುರಿ ನಾನಲ್ಲ, ನೀವು” ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಭಾವನಾತ್ಮಕ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು, ಆರೋಪಗಳೆಲ್ಲ ಆಧಾರ ರಹಿತ ಮತ್ತು ಸುಳ್ಳು ಎಂಬುದು ಆ ದೇವರಿಗೆ ಮಾತ್ರ ಗೊತ್ತು. ನನ್ನ ಮೇಲಿನ ಆರೋಪಗಳು ವಾಸ್ತವವಾಗಿ ಹೇಡಿಗಳ ಮತ್ತು ದುರ್ಬಲರ ಪಿತೂರಿಯ ಸಂಕೇತವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ನಮ್ಮ ವಿರೋಧಿಗಳ ಮುಖ್ಯ ಗುರಿ ನಾನಲ್ಲ, ನೀವೇ ಆಗಿದ್ದೀರಿ. ನಿಮ್ಮ ಪ್ರಾಮಾಣಿಕ ರಾಜಕಾರಣ ಅವರ ನಿದ್ದೆಗೆಡಿಸಿದೆ. ಅವರೆಲ್ಲರೂ ನಿಮಗೆ ಹೆದರುತ್ತಾರೆ. ದೆಹಲಿ ಮಾತ್ರವಲ್ಲದೆ ದೇಶವೇ ಕೇಜ್ರಿವಾಲ್ ಅವರನ್ನು ದೂರದೃಷ್ಟಿಯುಳ್ಳ ನಾಯಕರನ್ನಾಗಿ ಕಾಣುತ್ತಿದ್ದಾರೆ.
ಬಡತನ, ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಮತ್ತು ಭ್ರಷ್ಟಾಚಾರದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶಕ್ಕೆ ನೀವೇ ಆಶಾಕಿರಣ ಎಂದು ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಸರ್ಕಾರದ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬರೆದಿದ್ದಾರೆ.
ಫೆ.26 ರಂದು ಸಿಬಿಐ ಬಂಧನಕ್ಕೆ ಒಳಗಾಗಿರುವ ಮನೀಶ್ ಸಿಸೋಡಿಯಾ, ಸದ್ಯ ಕಸ್ಟಡಿಯಲ್ಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ 5 ದಿನಗಳ ಕಾಲ ಸಿಸೋಡಿಯಾರನ್ನು ಕಸ್ಟಡಿಗೆ ನೀಡಿದೆ.