Thursday, September 28, 2023
spot_img
- Advertisement -spot_img

ʼಕಾಂಗ್ರೆಸ್‌ ತತ್ವ, ಸಿದ್ದಾಂತ ನಂಬಿರೋರು ಪಕ್ಷ ಸೇರ್ತಿದ್ದಾರೆʼ

ಚಾಮರಾಜನಗರ: ಯಾರಿಗೆಲ್ಲಾ ನಮ್ಮ ಪಕ್ಷದ ತತ್ತ್ವ ಸಿದ್ಧಾಂತದ ಮೇಲೆ ನಂಬಿಕೆ, ವಿಶ್ವಾಸ ಇದೆಯೋ ಅಂತವರು ಬರ್ತಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಆಪರೇಷನ್ ಹಸ್ತ ವಿಚಾರವಾಗಿ ಪ್ರತಿಕ್ರಿಯಿಸಿ, ಜನಪರ ಕಾರ್ಯಕ್ರಮ ಕೊಡ್ತಾ ಇರೋ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರುತ್ತಿದ್ದಾರೆ , ಯಾವುದೇ ಕಂಡೀಷನ್ ಇಲ್ಲದೆ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.

ಇದನ್ನೂ ಓದಿ : ಶೋಭಾ ಯಾತ್ರೆ ಬದಲು ದೇವಸ್ಥಾನಕ್ಕೆ ಹೋಗಿ : ಹಿಂದುತ್ವ ಸಂಘಟನೆಗಳಿಗೆ ಹರಿಯಾಣ ಸಿಎಂ ಮನವಿ

ಗೃಹಲಕ್ಷ್ಮಿ ಬ್ಯಾನರ್ ನಲ್ಲಿ ಬಿಜೆಪಿ ಮಾಜಿ ಶಾಸಕ ನಿರಂಜನಕುಮಾರ್ ಫೋಟೋ ಅಳವಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ನನ್ನ ಗಮನಕ್ಕೆ ಬಂದಿಲ್ಲ, ನನಗೆ ಗೊತ್ತಿಲ್ಲ, ಅಚಾತುರ್ಯದಿಂದ ಆಗಿರಬಹುದು, ನನ್ನ ಗಮನಕ್ಕೆ ಈಗ ಬಂದಿದೆ, ಅದನ್ನ ಸರಿಪಡಿಸುತ್ತೇವೆ, ನನ್ನ ಗಮನಕ್ಕೆ ಬಂದಿಲ್ಲ ನಾನೇನು ಬ್ಯಾನರ್ ಆರ್ಡರ್ ಕೊಟ್ಟಿಲ್ಲ, ಯಾರು ಮಾಡಿದ್ದಾರೆ ಏನು ಆಗಿದೆಯೋ ಅದನ್ನ ಪರಿಶೀಲಿಸಿ ಸರಿಪಡಿಸುತ್ತೇವೆ ಎಂದು ತಿಳಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles