ಕೊಪ್ಪಳ : ರಾಜ್ಯದಲ್ಲಿ ಬೇರೆ ಪಕ್ಷದವರು ಕಾಂಗ್ರೆಸ್ ಸೇರಬೇಕೆಂದು ಹಂಬಲ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಎಂ.ಸಿ ಸುಧಾಕರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಮಾಜಿ ಶಾಸಕರು, ಸಚಿವರು ಕೂಡಾ ಸೇರ್ತಾರೆ ಎನ್ನುವ ಚರ್ಚೆ ಆಗ್ತಿದೆ, ಆದ್ರೆ ಇದುವರೆಗೂ ಯಾವುದೇ ರೀತಿಯ ಚರ್ಚೆಗಳು ಪಕ್ಷದ ವೇದಿಕೆಯಲ್ಲಿ ಆಗಿಲ್ಲ , ನಮ್ಮ ಅಭಿಪ್ರಾಯಗಳನ್ನು ಪಡೆಯುವ ಕೆಲಸ ಆಗಿಲ್ಲ, ಚರ್ಚೆ ಆಗದೆ ಇರುವ ವಿಷಯ ತೆಗೆದುಕೊಳ್ಳುವುದು ಅನಾವಶ್ಯಕ, ಅವರು ತಮ್ಮ ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟು ಹೋಗಿ ಅಧಿಕಾರ ಅನುಭವಿಸಿದ್ದಾರೆ, ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಅವರೇ ಅನ್ನುವಂತಹದ್ದನ್ನ ಅವರ ಪಕ್ಷದವರೇ ಹೇಳ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಅನ್ವರ್ ಭಾಷಾ ಆಯ್ಕೆ; ಅಧಿಕೃತ ಘೋಷಣೆ ಬಾಕಿ
ನಮ್ಮ ಪಕ್ಷ ಅವರ ಅವಧಿಯಲ್ಲಿ ಆದ ಎಲ್ಲ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸ್ತಾ ಇದೆ, ಈ ಸಮಯದಲ್ಲಿ ಅವರನ್ನ ಯಾವ ರೀತಿ ಪಕ್ಷಕ್ಕೆ ತಗೆದುಕೊಳ್ಳೋದು, ಜನರಿಗೆ ಸಮರ್ಥನೆ ಮಾಡಿಕೊಳ್ಳಲು ಯಾವ ರೀತಿ ಸಾಧ್ಯ ಇದೆ, ಅಷ್ಟು ದೊಡ್ಡ ಮಟ್ಟದ ಕಳಂಕಿತರನ್ನು ನಮ್ಮ ಪಕ್ಷ ಸೇರಿಸಿಕೊಳ್ಳಲ್ಲ ಎಂದು ತಿಳಿಸಿದರು.
ಬಿ ಎಲ್ ಸಂತೋಷ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಿ ಎಲ್ ಸಂತೋಷ ಏನ್ಮಾಡ್ತಾರೆ ಪಾಪ, ಬಿಟ್ಟೊಗೋರನ್ನ ತಡಿಬೇಕು, ರಾಜಕೀಯವಾಗಿ ಅಂತಹ ಹೇಳಿಕೆ ಕೊಡ್ತಾರೆ, ಸಂತೋಷ ಅವರ ಬಗ್ಗೆ ಪಕ್ಷದಲ್ಲಿ ಬಹಳ ಜನ ಇದ್ದಾರೆ ಅವರು ಮಾತಾಡ್ತಾರೆ ಎಂದು ಅಭಿಪ್ರಾಯಪಟ್ಟರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.