ವಿಜಯಪುರ: ಚಂದ್ರಯಾನ 3 ಯಶಸ್ಸು ವಿಚಾರ ನಿಜಕ್ಕೂ ಇದು ಭಾರತ ದೇಶಕ್ಕೆ ಹೆಮ್ಮೆಯ ವಿಷಯ ಎಂದು ವಿಜಯಪುರ ನಗರದಲ್ಲಿ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಚಂದ್ರನ ಅಂಗಳ ತಲುಪಿದ 4 ರಾಷ್ಟ್ರಗಳಲ್ಲಿ ನಾವು ಒಂದಾಗಿದ್ದೇವೆ, ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ನಾವು ವಿಶ್ವದ ಇತರರಿಗಿಂತ ಕಡಿಮೆ ಇಲ್ಲವೆಂದು ದೇಶ ನಿರೂಪಿಸಿದೆ , ಇಡೀ ಇಸ್ರೋ ತಂಡಕ್ಕೆ ಪ್ರಧಾನಿಯವರಿಗೆ ಈ ಹಿರಿಮೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.
ಚಂದ್ರಯಾನ 3 ರ ಯಶಸ್ಸಿಗೆ ಎಲ್ಲ ವಿಭಾಗದ ವಿಜ್ಞಾನಿಗಳು ಕಾರಣೀಕರ್ತರಾಗಿದ್ದಾರೆ, ಇಡೀ ರಾಷ್ಟ್ರದ ಜನರು ವಿಜ್ಞಾನಿಗಳಿಗೆ ಅಭಿನಂದಿಸುತ್ತಿದ್ದಾರೆ, ಚಂದ್ರಯಾನವನ್ನು ಅತೀ ಹೆಚ್ಚು ವೀಕ್ಷಕರು ವೀಕ್ಷಿಸಿದ್ದು ನಮ್ಮ ದೇಶಕ್ಕೆ ಹೆಮ್ಮೆಯಾಗಿದೆ ಎಂದು ಸಂತಸಪಟ್ಟರು.
ಇದನ್ನೂ ಓದಿ; ‘ಕೈ’ ಹಿಡಿಯೋಕೆ ತಡ ಮಾಡ್ತಿರೋದ್ಯಾಕೆ ಎಸ್‌ಟಿಎಸ್; ‘ಮುಂಬೈ ಡೈರಿ’ಗೆ ಬೆದರಿದ್ರಾ ಮಾಜಿ ಸಚಿವ..?
ಚಂದ್ರಯಾನ 3 ಯಶಸ್ಸಿನ ಬಳಿಕ ಇಸ್ರೋಗೆ ಪ್ರಧಾನಿ ಮೋದಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ವಾಭಾವಿಕವಾಗಿ ಪ್ರಧಾನಿ ಮೋದಿ ಐತಿಹಾಸಿಕ ಸಾಧನೆಯಾದ ಮೇಲೆ ಭೇಟಿ ನೀಡುತ್ತಿದ್ದಾರೆ, ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸೋ ಕೆಲಸ ನಿಜಕ್ಕೂ ಸ್ಪೂರ್ತಿ ತರುವಂತಹದ್ದು ಅದರಲ್ಲಿ ತಪ್ಪೇನಿದೆ ? ಎಂದು ಪ್ರಶ್ನಿಸಿದರು.
ಇನ್ನೂ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಚಂದ್ರಯಾನ 3 ಯಶಸ್ಸನ್ನು ರಾಜಕೀಯ ಲಾಭ ತೆಗೆದುಕೊಳ್ಳಲಿದ್ದಾರೆಂಬ ವಿಚಾರವಾಗಿ ಮಾತನಾಡಿ, ಜವಾಹರ ಲಾಲ್ ನೆಹರು, ಅಟಲ್ ಬಿಹಾರಿ ವಾಜಪೇಯಿಯವರಿಂದ ಹಿಡಿದು ಮೋದಿಯವರೆಗೆ ಎಲ್ಲರೂ ಕೆಲಸ ಮಾಡಿದ್ದಾರೆ, ಸೈನ್ಸ್ ಆ್ಯಂಡ್ ಟೆಕ್ನಾಲಜಿಯೇ ಬೇರೆ ರಾಜಕೀಯವೇ ಬೇರೆ, ಅದರಲ್ಲಿ ಕಾಂಗ್ರೆಸ್ ಬಿಜೆಪಿ ಎಂದರೆ ಅದು ತಪ್ಪಾಗುತ್ತದೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.