ಬೆಂಗಳೂರು: ಬಿಜೆಪಿ ಅವಧಿಯಲ್ಲಿನ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಈ ಬಗ್ಗೆ ನಾವು ಮಾತಾಡಿದ್ದು, ಎಲ್ಲ ಇಲಾಖೆಗಳ ಹಗರಣದ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಸಿದ್ದರಾಮಯ್ಯನವರು ನನ್ನ ಬಳಿ ಹೇಳಿದ್ದಾರೆ, ಎಲ್ಲೆಲ್ಲಿ ಭ್ರಷ್ಟಚಾರ ಆಗಿದೆಯೋ, ಎಲ್ಲೆಲ್ಲಿ ಅಕ್ರಮಗಳು ಆಗಿದೆಯೋ, ನೀರಾವರಿ ಇರಬಹುದು, ಪಿಎಸ್ಐ ಸ್ಕ್ಯಾಮ್ ಇರಬಹುದು ಮತ್ತೊಂದು ಇರಬಹುದು ಎಲ್ಲವನ್ನು ತನಿಖೆ ಮಾಡಿಸುತ್ತೇನೆ. ಯಾರು ತಪ್ಪಿತಸ್ಥರಿದ್ದಾರೆ ಅವರು ಅಧಿಕಾರಿಗಳಾಗಿರಲಿ, ಸಚಿವರಾಗಿರಲಿ ಯಾರೇ ಇರಲಿ ಅವರನ್ನು ಶಿಕ್ಷೆಗೆ ಒಳಪಡಿಸಿ, ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು ಎಂದು ನನಗೆ ಹೇಳಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಜನತೆಗೆ ಚುನಾವಣಾ ಪೂರ್ವ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ನಮ್ಮ ಗ್ಯಾರಂಟಿಗಳ ಈಡೇರಿಕೆಗೆ ಪ್ರಯತ್ನ ಮಾಡುತ್ತೇವೆ ಎಂದರು.’ನಾವು ಜನರಿಗಾಗಿ ಕೆಲಸ ಮಾಡುತ್ತೇವೆ , ಜನರ ಬೇಡಿಕೆ ಪೂರೈಸಲು ಸಿದ್ಧ ಎಂದಿದ್ದಾರೆ.