ಬಳ್ಳಾರಿ : ನಾವು ಜಿಲ್ಲೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಹಾಗೆ ಬದುಕುತ್ತಿದ್ದೆವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಆಡಳಿತ ಬಂದಮೇಲೆ ಪ್ರಶಾಂತವಾದ ವಾತಾವರಣವಿದೆ. ಜನರು ನೆಮ್ಮದಿಯಿಂದ ಬದುಕುತಿದ್ದಾರೆ, ಯಾವುದೇ ಗೊಂದಲಗಳಿಲ್ಲ. ಜನಾರ್ದನ ರೆಡ್ಡಿ ಅವರಿಗೆ ಭ್ರಮೆ ಇದೆ, ನಾವು ಯಾರಿಗೂ ತೊಂದರೆ ಕೊಡುತಿಲ್ಲ ಎಂದು ಸಚಿವ ಬಿ ನಾಗೇಂದ್ರ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಬಳಿಕ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಯಾರೋ ಒಬ್ಬ ಕಿಡಿಗೇಡಿ ಮಾಡಿದ ತಪ್ಪಿಗೆ, ಹೀಗೆ ಹೇಳುವುದು ಸರಿಯಲ್ಲ. ಅವರು ಎಲ್ಲಿಯಾದರೂ ಹೋರಾಟ ಮಾಡಲಿ, ಎದುರಿಸುವ ಶಕ್ತಿ ನಮಗಿದೆ. ಜಿಲ್ಲೆಯಲ್ಲಿ ಎಲ್ಲ ಪಕ್ಷಗಳ ಕಾರ್ಯಕರ್ತರು ಇದ್ದಾರೆ. ನಮಗೆ ಕಿರುಕುಳ ಕೊಟ್ಟವರು, ಬಿಜೆಪಿಯವರು ಹಾಗೆಂದು ಅವರಿಗೆ ನಾವು ತೊಂದರೆ ಕೊಟ್ಟಿಲ್ಲ ಎಂದು ರೆಡ್ಡಿ ವಿರುದ್ಧ ನಾಗೇಂದ್ರ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ‘ಮಣಿಪುರದಲ್ಲಿ ಜನ ಸಾಯುವಾಗ ಸುಮ್ಮನಿದ್ದು, ರಾಕೆಟ್ ಬಿಟ್ಟ ತಕ್ಷಣ ಓಡಿ ಬರುತ್ತಾರೆ’
ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದೇನು..?
ಕಳೆದ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದಂದು ಬಳ್ಳಾರಿಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ವರ್ಚ್ಯುವಲ್ ಮೂಲಕ ಭಾಗಿಯಾಗಿದ್ದ ಜನಾರ್ಧನ ರೆಡ್ಡಿ ಆಪ್ತರ ವಿರುದ್ಧ ಕಿಡಿ ಕಾರಿದ್ದರು. ಪರೋಕ್ಷವಾಗಿ ಮಾಜಿ ಸಚಿವ ಶ್ರೀರಾಮುಲು ಹಾಗೂ ಸಹೋದರ ಸೋಮಶೇಖರ್ ರೆಡ್ಡಿ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೆ ನನ್ನನ್ನು ಬಳ್ಳಾರಿಯಿಂದ ಹೊರಗಡೆ ಇಡಲು ನನ್ನವರೇ ಷಡ್ಯಂತ್ರ ಮಾಡಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರು ಆತಂಕದಲ್ಲಿದ್ದಾರೆ. ಸ್ಥಳೀಯ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಅವರ ಯಾವುದೇ ಕೆಲಸಗಳನ್ನು ಅಧಿಕಾರಿಗಳು ಮಾಡಿಕೊಡುತ್ತಿಲ್ಲ. ಪಕ್ಷದ ಕಾರ್ಯಕರ್ತರಿಗೆ ಯಾವುದೇ ಧಕ್ಕೆಯಾದರೆ ಜಿಲ್ಲೆಯ ಆಡಳಿತ ವ್ಯವಸ್ಥೆಯ ವಿರುದ್ಧ ವಿಧಾನಸೌಧದ ಮುಂದೆ ಧರಣಿ ಮಾಡುವುದಾಗಿ ಹೇಳಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.