ಕೊಪ್ಪಳ: ಬಹಳ ಸಂತೋಷ ನಂಜೇಗೌಡರಿಗೆ ಒಳ್ಳೆಯದಾಗಲಿ, ಮೊದಲು ಅವರ ಮೇಲೆ ಎಷ್ಟೋ ಹಗರಣಗಳಿವೆ ಅದರಿಂದ ಪಾರಾಗಲಿ ಎಂದು ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನೋ ಕೈ ಶಾಸಕ ನಂಜೇಗೌಡ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ನಂಜೇಗೌಡ ತಮ್ಮ ಹಗರಣಗಳಿಂದ ಪಾರಾಗ್ತಾರಾ? ಮೊದಲು ಅವರ ಮೇಲಿರುವ ಹಗರಣಗಳನ್ನು ಬಗೆಹರಿಸಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ; ಊಬರ್, ಆಟೋ ಚಾಲಕರ ಪ್ರತಿಭಟನೆ ರಾಜಕೀಯ ಪ್ರೇರಿತ : ಡಿಕೆಶಿ ಕಿಡಿ
ಹೆಚ್.ವಿಶ್ವನಾಥ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಹೆಚ್.ವಿಶ್ವನಾಥ ಯಾವ ಪಾರ್ಟಿಯಲ್ಲಿದ್ದಾರೆ, ನಮ್ಮ ಪಾರ್ಟಿಯಲ್ಲಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ನಮ್ಮ ಮೇಲೆ ಸುರ್ಜೇವಾಲ ಅವರಿಗೆ ದೂರು ಕೊಡುವವರು ಒಮ್ಮೆ ತಾವೇನು ಅಂತ ಯೋಚಿಸಲಿ, ನನ್ನ ಮೇಲೆ ಎಲ್ಲರೂ ದೂರು ಕೊಡಲಿ ಭಾರಿ ಸಂತೋಷ ಎಂದರು.
ಮೂರು ತಿಂಗಳ ನಂತರ ಸರ್ಕಾರ ಇರುತ್ತಾ ಇಲ್ವಾ ಗೊತ್ತಿಲ್ಲ ಅನ್ನೋ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯವರು ಹಗಲು ಕನಸು ಕಾಣ್ತಿದ್ದಾರೆ, ನಮ್ಮ ಪಕ್ಷದಲ್ಲಿ ಯಾವುದೇ ಕಿತ್ತಾಟವಿಲ್ಲ, ಪ್ರಜಾಪ್ರಭುತ್ವವಿದೆ ನಮಗೆ ಅನ್ನಿಸಿದನ್ನ ನಾವು ಹೇಳ್ತೇವೆ, ಅವರ ತರಹ ನಾವು ನಾಗ್ಪುರದಿಂದ ನಿರ್ದೇಶನ ಪಡೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.