ಬೆಂಗಳೂರು : ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರಿದ್ದಾರೆ. ಈ ಪೈಕಿ ಒಬ್ಬರಾದರೂ ಕಾವೇರಿ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಿದ್ರಾ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಪ್ರಶ್ನಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದದ ನಂತರ ಹೇಳಿಕೆ ನೀಡಿದ ಅವರು, ತಮಿಳುನಾಡಿನಲ್ಲಿ ಒಬ್ಬನೇ ಒಬ್ಬ ಬಿಜೆಪಿ ಸಂಸದನಿಲ್ಲ. ಆದರೂ, ಅವರು ಕೇಂದ್ರದ ಮೇಲೆ ಒತ್ತಡ ಹಾಕುವಂತ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಸದರೂ ಕಾವೇರಿ ವಿಚಾರದಲ್ಲಿ ಕೇಂದ್ರಕ್ಕೆ ಮಾನವರಿಗೆ ಮಾಡಿಕೊಡಬೇಕು ಎಂದರು. ನಮ್ಮ ರಾಜ್ಯದ ಬಿಜೆಪಿ ಸಂಸದರಿಗೆ ಕೇಂದ್ರದಲ್ಲಿ ಯಾವ ರೀತಿಯ ಗೌರವ ಇದೆಯೋ ಗೊತ್ತಿಲ್ಲ. ಮೊನ್ನೆ ರಸ್ತೆಯಲ್ಲಿ ಪರದಾಡಿದ್ದು ನೋಡಿದ್ರಲ್ಲಾ ಎಂದು ಲೇವಡಿ ಮಾಡಿದರು.
ನಾಳೆ ಲೀಗಲ್ ಟೀಂ ಜೊತೆ ಸಭೆ : ನೀರಾವರಿ ಸಚಿವರು ದೆಹಲಿಯಲ್ಲಿ ಕೇಂದ್ರ ಮತ್ತು ರಾಜ್ಯದ ಲೀಗಲ್ ಟೀಂ ಜೊತೆ ನಾಳೆ ಸಭೆ ಕರೆದಿದ್ದಾರೆ. ನಾವು ವಾಸ್ತವ ಸ್ಥಿತಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲಿದ್ದೇವೆ. ಆ ಬಳಿಕ ಪ್ರಾಧಿಕಾರ ಯಾವ ತೀರ್ಮಾನಕ್ಕೆ ಬರುತ್ತೋ ಕಾದು ನೋಡೋಣ. ಐದು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಈಗ ತೀರ್ಮಾನ ಆಗಿದೆ. ನಾವು ಪ್ರಾಧಿಕಾರದ ಸೂಚನೆ ಪಾಲಿಸಲೇಬೇಕಿತ್ತು. ಹಾಗಾಗಿ, 2 ಸಾವಿರ ಸೋರಿಕೆ ನೀರಿನ ಜೊತೆ 3 ಸಾವಿರ ಸೇರಿಸಿ 5 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗ್ತಿದೆ. ನಾವು ನಮ್ಮ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟ ಮೇಲೆ ಸುಪ್ರೀಂ ಆದೇಶ ಏನು ಬರಲಿದೆ ಎಂಬುವುದನ್ನು ಕಾದು ನೋಡೋಣ ಎಂದರು.
ಬರ ಘೋಷಣೆಯ ಬಗ್ಗೆ ಸೆ. 4ರಂದು ಸಭೆ : ಬರ ಘೋಷಣೆಯ ಬಗ್ಗೆ ಈಗಾಗಲೆ ಸಚಿವರಾದ ಕೃಷ್ಣ ಬೈರೇಗೌಡರ ಜೊತೆ ಚರ್ಚೆ ಮಾಡಿದ್ದೇನೆ. ಅವರು ಸೆ. 4ರಂದು ಸಭೆ ನಿಗದಿ ಮಾಡಲು ಸೂಚಿಸಿದ್ದಾರೆ. ಸಭೆ ನಡೆಸಿ ಬರ ಘೋಷಣೆಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಪ್ರಧಾನಮಂತ್ರಿಗಳು ಸಮಯ ನೀಡಿದಾಗ ಕೇಂದ್ರಕ್ಕೆ ರಾಜ್ಯದಿಂದ ನಿಯೋಗ ಹೋಗಲಾಗುವುದು. ಪ್ರಧಾನಮಂತ್ರಿ ಇದುವರೆಗೆ ಅನುಮತಿ ಕೊಟ್ಟಿಲ್ಲ ಎಂದು ತಿಳಿಸಿದರು.
ನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.