Monday, December 11, 2023
spot_img
- Advertisement -spot_img

‘ಮೊದಲೇ ಹೋಗಬೇಕಿತ್ತು, ಈಗ ಯಾಕೆ ಹೋಗ್ತಿದ್ದಾರೆ..?’ ಬಿಜೆಪಿ ನಾಯಕರ ಮೇಲೆ ಪರಂ ಕಿಡಿ!

ಬೆಂಗಳೂರು: ದಲಿತರ ಭೂ ಕಬಳಿಕೆ ಹಾಗೂ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಚಿವ ಡಿ. ಸುಧಾಕರ್ ಅವರಿಂದ ಅನ್ಯಾಯಕ್ಕೊಳಗಾಗಿದ್ದಾರೆ ಎನ್ನಲಾದ ದಲಿತ ಕುಟುಂಬದ ಮನೆಗೆ ಬಿಜೆಪಿ ನಿಯೋಗದ ಭೇಟಿ ನೀಡಿದ್ದು, ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ನಗರದಲ್ಲಿ ಮಾತನಾಡಿರುವ ಅವರು, ‘ಬಿಜೆಪಿ ನಿಯೋಗ ಮೊದಲೇ ಹೋಗಬೇಕಿತ್ತು, ಈಗ ಯಾಕೆ ಹೋಗ್ತಿದ್ದಾರೆ? ಇದು ಹತ್ತು ವರ್ಷ ಹಳೆಯ ಪ್ರಕರಣ ಎಂದು ಸುಧಾಕರ್ ಈಗಾಗಲೇ ಹೇಳಿದ್ದಾರೆ; ಬಿಜೆಪಿ ಅದನ್ನು ಮತ್ತೆ ಕೆದಕುವ ಕೆಲಸ ಮಾಡ್ತಿದೆ’ ಎಂದು ಹೇಳಿದರು.

ಇದನ್ನೂ ಓದಿ; ಚೈತ್ರಾ ಕುಂದಾಪುರ ವಂಚನೆ ಪ್ರಕರಣದಿಂದ ಅಂತರ ಕಾಯ್ದುಕೊಂಡ ಬಿಜೆಪಿ-ಸಂಘಪರಿವಾರ

ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಸಚಿವರ ಬಂಧನ ಆಗಿಲ್ಲ ಯಾಕೆ ಎಂಬ ಬಿಜೆಪಿ ನಾಯಕರ ಮಾತಿಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲವುದಕ್ಕೂ ಒಂದು ಪದ್ಧತಿ ಇದೆ; ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಎಷ್ಟು ನ್ಯಾಯ ಒದಗಿಸಿದ್ದಾರೆ’ ಎಂದು ಪ್ರಶ್ನಿಸಿದರು.

ಉದ್ಯಮಿಯಿಂದ ಬಹುಕೋಟಿ ರೂ. ಪಡೆದು ವಂಚಿಸಿರುವ ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಮಾತನಾಡಿ, ‘ನನಗೆ ಬಂದ ಮಾಹಿತಿ ಪ್ರಕಾರ ಬಿಜೆಪಿಯಲ್ಲಿ ಟಿಕೆಟ್ ಕೊಡಿಸೋದಾಗಿ ಹಣ ಪಡೆದಿದ್ದಾರೆ. ₹3.5 ಕೋಟಿ ಹಣ ಪಡೆದಿರುವುದಾಗಿ ದೂರು ದಾಖಲಾಗಿದೆ. ಆ ಪ್ರಕರಣದಲ್ಲಿ ದೂರು ಸ್ವೀಕರಿಸಿ ವಿಚಾರಣೆ ನಡೆಸಲಾಗುತ್ತಿದೆ, ಉಳಿದ ವಿಚಾರ ತನಿಖೆ ಬಳಿಕ ಗೊತ್ತಾಗಲಿದೆ. ದೂರುದಾರರ ಸ್ಟೇಟ್ಮೆಂಟ್ ತೆಗೆದುಕೊಂಡ ನಂತರ ಆರೋಪಿಗಳ ಬಂಧನ ಆಗಿದೆ. ಪ್ರಕರಣದಲ್ಲಿ ಸ್ವಾಮೀಜಿ ತಪ್ಪಿದ್ರೆ ಅವರ ಬಂಧನ ಕೂಡ ಆಗುತ್ತೆ’ ಎಂದು ಹೇಳಿದರು.

‘ಪೊಲೀಸರು ಸುಮೋಟೋ ಹಾಕಿಕೊಂಡಿಲ್ಲ; ದೂರಿನ ಆಧಾರದ ಮೇಲೆ ಬಂಧನ ಆಗಿದೆ. ತಪ್ಪು ಯಾರೇ ಮಾಡಿದ್ರೂ ಕ್ರಮ ಆಗಲಿದೆ. ಅವರು ಹಿಂದೂ ಪರವಾದ ಭಾಷಣ ಮಾಡಿದ್ದಾರೆ ಎಂದ ಮಾತ್ರಕ್ಕೆ ಈ ಪ್ರಕರಣಕ್ಕೆ ಅದನ್ನು ಎಳೆದು ತರುವುದು ಬೇಡ’ ಎಂದು ಹೇಳಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles