ಧಾರವಾಡ : ಬಸವರಾಜ ರಾಯರೆಡ್ಡಿ ಅವರು ಅನುಭವಿ ರಾಜಕಾರಣಿ, ಅವರು ಪತ್ರ ಬರೆದಿದ್ದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ, ಅದರಲ್ಲಿ ಬಹಳ ಸ್ಪಷ್ಟವಾಗಿದೆ. ವಿದ್ಯುತ್ ಸಮಸ್ಯೆಯ ಹಿನ್ನೆಲೆಯಲ್ಲಿ ಕ್ಷೇತ್ರದಿಂದ ರೈತರ ಒತ್ತಡ ಇದೆ, ಸಂಬಂದಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಶಾಸಕರಾಗಿ ಜನರ ಸಮಸ್ಯೆಗೆ ಸ್ಪಂದಿಸುವದು ನಮ್ಮ ಕರ್ತವ್ಯ. ಜನರಿಗೆ ಆಡಳಿತ ಪಕ್ಷದ ಶಾಸಕರ ಮೇಲೆ ಬಹಳ ಭರವಸೆ ಇರುತ್ತವೆ. ಅದಕ್ಕಾಗಿ ಸಿಎಂಗೆ ಪತ್ರ ಬರೆದರೆ ತಪ್ಪೇನಿಲ್ಲ, ಅದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದು ಬೇಡ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿಕೆ ನೀಡಿದ್ದಾರೆ.
ರಾಯರೆಡ್ಡಿ ಅವರ ಫಾರ್ಮ್ ಹೌಸ್‌ಗೆ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಯರೆಡ್ಡಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದ ವಿಷಯಕ್ಕೂ, ನಮ್ಮ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಉಚಿತ ಯೋಜನೆಗಳ ವಿರುದ್ಧ ಮತ್ತೆ ಕಿಡಿಕಾರಿದ ಪಿಎಂ ಮೋದಿ
ಶಾಸಕರಿಗೆ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ, ಅದಕ್ಕೆ ಸಚಿವರ ಹಾಗೂ ಸಿಎಂ ಗಮನ ಸೆಳೆಯಲು ಪತ್ರ ಬರೆದಿದ್ದಾರೆ. ಇದರಲ್ಲಿ ಯಾವುದೇ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ನಾವು ರಾಯರೆಡ್ಡಿ ಸಾಹೇಬ್ರ ಕೋರಿಕೆಯ ಮೇರೆಗೆ ಬಂದಿದ್ದೇವೆ. ಇಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಕಾಡೆಮಿ ಇದೆ. ಈ ಹಿಂದೆ ಭೇಟಿ ನೀಡಲು ಸಮಯ ಸಿಕ್ಕಿರಲಿಲ್ಲ, ಅದಕ್ಕೆ ಇವತ್ತು ಬಂದಿದ್ದೆನೆ. ಇದಕ್ಕೆ ಅನಾವಶ್ಯಕ ಅರ್ಥ ಬೇಡ ಎಂದರು.
ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ಸ್ಪಂದನೆ ಮಾಡಿಲ್ಲ. ಇಂಧನ ಸಚಿವರು ಹಾಗೂ ಸಿಎಂ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಭೆ ನಂತರ ತಿರ್ಮಾನ ಆಗಲಿದೆ ಎಂದು ಸಚಿವರು ತಿಳಿಸಿದರು.
ಈಶ್ವರಪ್ಪ ಆಪರೇಷನ್ ಕಮಲದ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಸುಧಾಕರ್, ನಾನು ಇಂಥ ಹೇಳಿಕೆಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ರಾಜಕಾರಣದಲ್ಲಿ ಇದು ಸರ್ವೆ ಸಾಮಾನ್ಯ. ಈಶ್ವರಪ್ಪ ಹಿರಿಯರು ಅವರಿಗೆ ಟಿಕೆಟ್ ಕೊಡಲಿಲ್ಲ, ಪಕ್ಷ ಏನಾದರು ಕೊಡುವ ಭರವಸೆಯನ್ನು ನೀಡಿರಬೇಕು. ವರಿಷ್ಠರ ಗಮನ ಸೆಳೆಯಲು ಅವರು ಈ ರೀತಿ ಹೇಳಿಕೆ ಕೊಟ್ಟಿರಬೇಕು ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಬೇಡ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.