ಶಿವಮೊಗ್ಗ: ರಾಜ್ಯದಲ್ಲಿ ಇತಿಹಾಸ ಪುಟಕ್ಕೆ ಸೇರುವ ಯೋಜನೆಯನ್ನು ನಮ್ಮ ಸರ್ಕಾರ ಕೊಡುತ್ತಿದೆ. ಗೃಹಲಕ್ಷ್ಮಿ ಯೋಜನೆಯನ್ನು ಸಿಎಂ, ಡಿಸಿಎಂ ಸೇರಿದಂತೆ ಸರ್ಕಾರ ಜಾರಿಗೊಳಿಸಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಡ ಹೆಣ್ಣುಮಕ್ಕಳಿಗೆ ಅಂದ್ರೇ ಮನೆಯೊಡತಿಗೆ 2 ಸಾವಿರ ಕೊಡುತ್ತಿದ್ದೇವೆ. ಬೆಲೆ ಏರಿಕೆಯ ನಡುವೆ ಕುಟುಂಬದ ನಿರ್ವಹಣೆಗೆ ಕೊಡಲಾಗುತ್ತಿದೆ. ಅನ್ನಭಾಗ್ಯ, ಗೃಹಜ್ಯೋತಿ, ಹಾಗೂ ಶಕ್ತಿ ಯೋಜನೆ ಈಗಾಗಲೇ ಕೊಟ್ಟಿದ್ದೇವೆ. ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ಮಾಡುತ್ತಿದ್ರು. ಅವರನ್ನು ನಾವು ದೂರ ನಿಲ್ಲಿಸೋದು ಬೇಡ. ಅವರ ಪ್ರಧಾನಿಯವರೇ ನಿಲ್ಸಿದ್ದಾರೆ. ಪ್ರಧಾನಿ ಬಂದಾಗ ರಾಜ್ಯಾಧ್ಯಕ್ಷರೇ ಬ್ಯಾರಿಕೇಡ್ ಹಿಂದೆ ನಿಂತಿದ್ದರು. ಪ್ರಧಾನಿ ಉತ್ತರ ಕೊಟ್ಟಿದ್ದನ್ನು ಜನರು ನೋಡಿದ್ದಾರೆ ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ಮುಸ್ಲಿಂ ಮಹಿಳೆಯರಿಂದ ರಾಖಿ ಕಟ್ಟಿಸಿಕೊಂಡ ಬಿಜೆಪಿ ಸಂಸದ ಉಮೇಶ್ ಜಾಧವ್
ಇನ್ನು ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಮಾಡಿರುವ ವಿಚಾರವಾಗಿ ಮಾತನಾಡಿದ ಸಚಿವ ಮಧು ಬಂಗಾರ, ಉಚಿತವಾಗಿ ಕೊಡುತ್ತೇವೆ ಎಂದವರು 200 ರೂ. ಕಡಿಮೆ ಮಾಡಿದ್ದಾರೆ. ಪುಗ್ಸಟ್ಟೆ ಕೊಡುತ್ತೇವೆ ಎಂದು ಹೇಳಿದ ಮಾತು ಉಳಿಸಿಕೊಳ್ಳಲಿ. ಉಚಿತವಾಗಿ ಕೊಡಲಿ.. ನಾನೇ ಹೋಗಿ ಹಾರ ಹಾಕ್ತೇನೆ. ಸನ್ಮಾನ ಮಾಡ್ತೇನೆ ಎಂದರು.
ಕಾವೇರಿ ನೀರು ವಿವಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೋರ್ಟ್ ಅಂಗಳದಲ್ಲಿದೆ. ಈ ಸಂದರ್ಭದಲ್ಲಿ ತಂದೆ ಬಂಗಾರಪ್ಪರನ್ನು ನೆನಪು ಮಾಡಿಕೊಳ್ಳಬೇಕು. ಅಂದಿನ ಕೋರ್ಟ್ ರೂಲ್ಸ್ ಹಾಗೂ ಇಂದಿನ ಕೋರ್ಟ್ ರೂಲ್ಸ್ ಗೆ ಬದಲಾವಣೆ ಇದೆ. ಕಾನೂನಿಗೆ ನಾವು ತಲೆ ಭಾಗಬೇಕಾಗುತ್ತದೆ. ಕಾನೂನು ಕೂಡ ನಮ್ಮ ವಸ್ತುಸ್ಥಿತಿ ಆಧರಿಸಿ, ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲೂ ರೈತರೇ, ಅಲ್ಲೂ ರೈತರೇ ಯಾರಿಗೂ ತೊಂದರೆಯಾಗಬಾರದು. ಆದರೇ, ರಾಜ್ಯದ ರೈತರ ಹಿತ ಕಾಪಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಬರಗಾಲ ಪರಿಸ್ಥಿತಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಬರದ ಪರಿಸ್ಥಿತಿ ಇದೆ. ಬರಗಾಲ ಎಂದೂ ಸರ್ಕಾರ ಇನ್ನೂ ಘೋಷಣೆ ಮಾಡಿಲ್ಲ. ಕೇಂದ್ರ ಸರ್ಕಾರದ ನಿಯಮಾವಳಿ ಯಲ್ಲಿ ಒಂದಷ್ಟು ಬದಲಾವಣೆ ಆಗಬೇಕು. ಎಲ್ಲವನ್ನೂ ಪರಿಶೀಲಿಸಿ, ಸರ್ಕಾರ ನಿರ್ಧಾರ ಮಾಡುತ್ತೇ. ಶಿವಮೊಗ್ಗ ಜಿಲ್ಲೆಯನ್ನು ಬರ ಪೀಡಿತ ಘೋಷಿಸಲು ಕ್ರಮ ತೆಗೆದುಕೊಳ್ತೇವೆ ಎಂದರು.
ಇದನ್ನೂ ಓದಿ : ರಾಯಚೂರಿನಲ್ಲಿ ‘ಗೃಹಲಕ್ಷ್ಮಿ’ ಗಲಾಟೆ; ರೊಚ್ಚಿಗೆದ್ದ ಪತಿಯರು
ಸರ್ಕಾರಕ್ಕೆ ನೂರು ದಿನ- ಬಿಜೆಪಿ ಚಾರ್ಜ್ ಶೀಟ್ ವಿಚಾರವಾಗಿ ಮಾತನಾಡಿದ ಸಚಿವ ಮಧು ಬಂಗಾರ, ಬಿಜೆಪಿಯವರು ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅದರಿಂದ ಎಷ್ಟು ಜನ ಸಿಕ್ಕಿಹಾಕಿಕೊಂಡಿದ್ದಾರೆ. ಸುಮ್ಮನೆ ಪಟ್ಟಿ ಬಿಡುಗಡೆ ಮಾಡಿದ್ರೇ ಆಗಲ್ಲ.. ಅದರಲ್ಲಿ ಅಂಶಗಳು ಇರಬೇಕು. ಸೋತಿರೋರು ಟೀಕಾ- ಟಿಪ್ಪಣಿ ಬಿಟ್ಟು ಬೇರೆನು ಮಾಡೋಕೆ ಸಾಧ್ಯ. ಭ್ರಷ್ಟಾಚಾರ ಆದ್ರೆ, ಹೇಳಲಿ ಸರ್ಕಾರ ಕ್ರಮ ಕೈಗೊಳ್ಳುತ್ತೆ. ಬಿಜೆಪಿಯವರಿಗೆ ಅದೊಂದು ರೋಗದ ರೀತಿ ಆಗಿದೆ ಎಂದು ಹೇಳಿದ್ದಾರೆ.
ಪಕ್ಷಾಂತರ ವಿಚಾರವಾಗಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ಹೈಕಮಾಂಡ್, ಸಿಎಂ ಹಾಗೂ ಡಿಸಿಎಂ ಸೂಚನೆಯಂತೆ ಮಾಡಲಾಗುತ್ತಿದೆ. ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.