ಬೆಂಗಳೂರು: ನರೇಂದ್ರ ಮೋದಿ ತಮ್ಮ ನೇತೃತ್ವದಲ್ಲಿ ಉತ್ತಮ ಸರ್ಕಾರ ನೀಡಿದ್ದು, ಅದನ್ನ ನೋಡಿಕೊಂಡೇ ನಾನು ಬಿಜೆಪಿಗೆ ಬಂದೆ. ನಾನು ಇಷ್ಟಪಟ್ಟು ಬಿಜೆಪಿಗೆ ಬಂದೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ನಾನೂ ಬೇರೆ ಪಕ್ಷದಿಂದ ಬಂದವನು. ನನಗೆ ಅಲ್ಲಿ ಅಸಮಾಧಾನವಿತ್ತು. ನನಗೆ ಅಲ್ಲಿ ಇಷ್ಟವಿರಲಿಲ್ಲ ಹಾಗಾಗಿ ನಾನು ಬಿಜೆಪಿಗೆ ಬಂದೆ. ದೇಶದಲ್ಲಿ ನಾನು ಯೋಚಿಸಿದ ಹಾಗೆ ಇನ್ನೂ ಇಪ್ಪತ್ತೈದು ವರ್ಷ ಬಿಜೆಪಿ ಇರುತ್ತೆ ಎಂದರು. ಎಂಟಿಬಿ ಆಡಿಯೋ ವೈರಲ್ ಆಗಿದೆ ಆರೋಪ ಇದ್ದು, ಅವರು ಯಾಕೆ ಆ ರೀತಿ ಮಾತಾಡಿದ್ದಾರೆ ನನಗೆ ಗೊತ್ತಿಲ್ಲ, ನಾನಿನ್ನೂ ಅವರನ್ನ ಭೇಟಿ ಮಾಡಿಲ್ಲ. ಭೇಟಿ ಮಾಡಿ ನಂತರ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ನಾವು ಹದಿನೇಳು ಜನ ಬಿಜೆಪಿಗೆ ಸೇರುವಾಗ ಹಣ ಪಡೆದು ಸೇರಿಲ್ಲ. ನರೇಂದ್ರ ಮೋದಿ ಆಡಳಿತ ನೋಡಿ ಸೇರಿದ್ವಿ. ನಮ್ಮ ಮೇಲೂ ಆರೋಪ ಮಾಡಿದ್ದರು. ಡಿಕೆ ಶಿವಕುಮಾರ್‌ಗೆ ಮಾತನಾಡಲು ಏನೂ ವಿಷಯ ಇಲ್ಲ ಹಾಗಾಗಿ ಪುನಃ ಆಪರೇಷನ್ ಕಮಲ ಬಗ್ಗೆ ಮಾತನಾಡುತ್ತಾರೆ. ನಮಗೆ ಕೆಲಸವಿದೆ ಹಾಗೂ ಜವಾಬ್ದಾರಿ ಇದೆ. ನಾವು ಬಿಜೆಪಿ ಪಕ್ಷದಲ್ಲಿ ಕೆಲಸ ಮಾಡಿಯೇ ಗುರುತಿಸಿಕೊಂಡಿದ್ದೇವೆ. ಬೇರೆಯವರ ಬಗ್ಗೆ ಅನಗತ್ಯ ಟೀಕೆ ಟಿಪ್ಪಣಿಗಳೇಕೆ ಎಂದು ಸುಮ್ಮನ್ನಿದ್ದೇವೆ ಎಂದರು.
ಈಗ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾರೆ. ಉತ್ತಮ ಆಡಳಿತ ನೀಡುತ್ತಿದ್ದಾರೆ. ಇಂತಹ ಸರ್ಕಾರ ನೋಡಿ ಮೆಚ್ಚಿ ಬರುವವರನ್ನ ನಾವೇಕೆ ತಡೆಯಬೇಕು. ಎಲ್ಲರ ಹಿನ್ನೆಲೆ ನೋಡಿಯೇ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ನಮ್ಮ ಬ್ಯಾಗ್ರೌಂಡ್ ನೋಡಿಯೇ ಸೇರಿಸಿಕೊಂಡರು. ಬಿಜೆಪಿ ಎಂದರೆ ಶುದ್ಧವಾದ ಅಭಿವೃದ್ಧಿ ಮಾಡುವ ಪಕ್ಷ ಹಾಗಾಗಿ ನಮ್ಮ ಪಕ್ಷಕ್ಕೆ ಬರ್ತಾರೆ ಎಂದರು.