Monday, March 20, 2023
spot_img
- Advertisement -spot_img

ನನಗೆ ಭಾರತೀಯ ಜನತಾ ಪಾರ್ಟಿ ಶಕ್ತಿ ತುಂಬಿದೆ : ಸಾರಿಗೆ ಸಚಿವ ಶ್ರೀರಾಮುಲು

ಬಳ್ಳಾರಿ: ಸಿಎಂ ಬೊಮ್ಮಾಯಿ ಕೊಟ್ಟ ಮಾತನ್ನು ಈಡೇರಿಸಿದ್ದಾರೆ. ಎಸ್​ಟಿ ಸಮುದಾಯಕ್ಕೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳವಾಗಿದೆ. ಇದರಿಂದ ಹನುಮನಿಗೆ, ಪ್ರಭು ಶ್ರೀರಾಮಚಂದ್ರ ಶಕ್ತಿ ತುಂಬಿದ ಹಾಗೇ ನನಗೆ ಭಾರತೀಯ ಜನತಾ ಪಾರ್ಟಿ ಶಕ್ತಿ ತುಂಬಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಗುಡುಗಿದ್ದಾರೆ.

ಸಮಾವೇಶದಲ್ಲಿ ಮಾತನಾಡಿ, ಶ್ರೀಕೃಷ್ಣನಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸುದರ್ಶನ ಚಕ್ರ ಬಿಟ್ಟಿದ್ದಾರೆ ಈ ಚಕ್ರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ನ ಶಿರಚ್ಛೇದನ ಮಾಡಲಿದೆ ಎಂದರು. ಎಸ್​ಸಿ, ಎಸ್​ಟಿ ಸಮುದಾಯಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಹಿನ್ನೆಲೆ ಬಳ್ಳಾರಿಯಲ್ಲಿ ಬಿಜೆಪಿ ಎಸ್​ಟಿ ಮೋರ್ಚಾದಿಂದ ಸಮಾವೇಶ ಆಯೋಜಿಸಲಾಗಿದೆ ಎಂದರು.

ನಮ್ಮ ಯಡಿಯೂರಪ್ಪ, ನಮ್ಮ ಬೊಮ್ಮಾಯಿ ಬಳ್ಳಾರಿಗೆ ಬಂದು ನಿಂತಿದ್ದಾರೆ. ನಿಮಗೆ ತಾಖತ್ತಿದ್ದರೇ ಬನ್ನಿ ನೋಡೋಣ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲ್​ ಹಾಕಿದ್ದಾರೆ. ನಿಮ್ಮ ಜಾತಿಯ ಪರವಾಗಿ ನಾನಿದ್ದೇನೆ ಅಂತಾ ಬೊಮ್ಮಾಯಿ ಮಾತುಕೊಟ್ಟಿದ್ದರು. ಆ ಕೆಲಸವನ್ನು ಬೊಮ್ಮಾಯಿ ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯನವರೇ ಈ ಚುನಾವಣೆಯಲ್ಲಿ ಸುನಾಮಿಯಾಗುತ್ತೆ ಅಂತೀರಾ.? ಸಿದ್ದರಾಮಯ್ಯನವರೇ ಚುನಾವಣೆವರೆಗು ಕಾಯಬೇಡಿ ಈ ಸಮಾವೇಶ ಮುಗಿದ ಕೂಡಲೇ ನಿಮ್ಮ ಪಕ್ಷ ಬೇರು ಸಮೇತ ಚಿದ್ರ ಚಿದ್ರವಾಗಲಿದೆ ಎಂದರು.

Related Articles

- Advertisement -

Latest Articles