Monday, December 11, 2023
spot_img
- Advertisement -spot_img

ಪ್ರಕರಣದಿಂದ ಬಚಾವ್ ಆಗಲು ದೇವರ ಮೊರೆ ಹೋದ ಸಚಿವ ಡಿ. ಸುಧಾಕರ್!

ಚಿತ್ರದುರ್ಗ : ದಲಿತ ಕುಟುಂಬವೊಂದು ದೌರ್ಜನ್ಯಕ್ಕೆ ಒಳಗಾಗಿದೆ ಎಂದು ಸಚಿವರ ಮೇಲೆ ಅಟ್ರಾಸಿಟಿ ಎಫ್ಐಆರ್ ದಾಖಲಾದ ಬೆನ್ನಲ್ಲೇ ಸಚಿವ ಡಿ ಸುಧಾಕರ್ ದೇವರ ಮೊರೆ ಹೋಗಿದ್ದಾರೆ.

ನಗರದ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿರುವ ತಿಪ್ಪೇರುದ್ರಸ್ವಾಮಿ ದೇವರ ದರ್ಶನ ಪಡೆದ ಡಿ. ಸುಧಾಕರ್ ತಿಪ್ಪೇರುದ್ರಸ್ವಾಮಿಯ ಪರಮ ಭಕ್ತರಾಗಿದ್ದಾರೆ. ಇದರಿಂದ ತನ್ನ ನೆಚ್ಚಿನ ದೇವರಲ್ಲಿ ಕೇಸ್ ನಿಂದ ಪಾರಾಗಲು ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಸಚಿವರಾದ ಮೇಲೆ ಇದೆ ಮೊದಲ ಭಾರಿಗೆ ಈ ದೇವಾಲಯಕ್ಕೆ ಭೇಟಿ ಕೊಟ್ಟಿರುವ ಸುಧಾಕರ್, ತನ್ನ ಮೇಲೆ ದಾಖಲಾಗಿರುವ ಕೇಸ್ ನಿಂದ ಸಚಿವ ಸ್ಥಾನಕ್ಕೆ ತೊದರೆಯಾಗುವ ಸಾಧ್ಯತೆ ಹೆಚ್ಚಿದ್ದು, ಈ ಸಂಕಷ್ಟ ಪರಿಹಾರಕ್ಕಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಇಂದು ‘ಕೈ’ ಹಿಡಿಯಲಿದ್ದಾರೆ ಅಶೋಕ್, ಹೆಚ್‌ಡಿಕೆ ಬೆಂಬಲಿಗರು!

ಏನಿದು ಸಚಿವ ಡಿ ಸುಧಾಕರ್ ಪ್ರಕರಣ?

ಸೆವೆನ್‌ ಹಿಲ್ಸ್‌ ಡೆವಲಪರ್ಸ್‌ ಮತ್ತು ಟ್ರೇಡರ್ಸ್‌ ಕಂಪನಿಯ ಪಾಲುದಾರರಾದ ಸಚಿವ ಸುಧಾಕರ್‌ ಅವರು ಮೋಸದಿಂದ ಯಲಹಂಕ ಗ್ರಾಮದ ಸರ್ವೆ ನಂಬರ್‌ 108/1ರ ಜಮೀನು ಕಬಳಿಸಿದ್ದಾರೆ. ಈ ಜಮೀನಿನ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಸಚಿವರು ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸಗಿದ್ದಾರೆ. ಮನೆಯಲ್ಲಿದ್ದ ತಮ್ಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕುಟುಂಬದ ಮಹಿಳೆಯರನ್ನು ಹೊರಗೆ ಎಳೆದೊಯ್ದು ಜೆಸಿಬಿ ಮೂಲಕ ಮನೆ ಕೆಡವಿಸಿದ್ದಾರೆ ಎಂದು ಮುನಿಯಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ : CCB ಕಚೇರಿಯಲ್ಲಿ ಕುಸಿದು ಬಿದ್ದ ಚೈತ್ರಾ ಕುಂದಾಪುರ : ಆಸ್ಪತ್ರೆಗೆ ದಾಖಲು

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles