ಕೋಲಾರ : ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ವಿಷ ಜಂತು ಎಂದು ಉಸ್ತುವಾರಿ ಸಚಿವ ಸುರೇಶ್ ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಕೆ ಜಾತಿ ಜನಾಂಗಗಳ ಮಧ್ಯೆ ತಂದಿಡುವ ವಿಷ ಜಂತು, ಅವರ ಈ ಕೆಲಸದಿಂದ ನನಗೂ ಆಶ್ಚರ್ಯ ಆಗಿದೆ, ಅಮಾಯಕರಿಗೆ ಏಳು ಕೋಟಿ ವಂಚಿಸಿದ್ದಾರೆ. ಚೈತ್ರಾ ಇಲ್ಲದಿರುವ ನಾಟಕ ಪಾತ್ರಧಾರಿಗಳನ್ನ ಸೃಷ್ಠಿ ಮಾಡಿದ್ದಾರೆ, ಈ ವಿಚಾರ ಬಹಳಷ್ಟು ಖಂಡನೀಯವಾಗಿದ್ದು, ಸಮಾಜಕ್ಕೆ ಈ ರೀತಿ ಮಾರಕವಾದವರು ಜೈಲಿಗೆ ಹೋಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Narendra Modi : ಇಂಡಿಯಾ ಒಕ್ಕೂಟವನ್ನು ‘ಘಮಾಂಡಿಯಾ’ ಎಂದು ಪಿಎಂ ಮೋದಿ ವಾಗ್ದಾಳಿ
ಬಿ.ಕೆ.ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯ ವಿರುದ್ದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿ.ಕೆ.ಹರಿಪ್ರಸಾದ್ ಮಾತಿಗೆ ಅಷ್ಟೊಂದು ಮಹತ್ವ ಕೊಡುವ ಅವಶ್ಯಕತೆ ಇಲ್ಲ, ನಮಗೆ ಹೈ ಕಮಾಂಡ್ ಇದೆ ಎಐಸಿಸಿ ಅಧ್ಯಕ್ಷರು ಇದ್ದಾರೆ ತೀರ್ಮಾನ ಮಾಡುತ್ತಾರೆ, ಎಐಸಿಸಿ ಅಧ್ಯಕ್ಷರು ನಮ್ಮವರೇ ಇದ್ದಾರೆ ಈಗಾಗಲೇ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ವಿರೋಧ ಪಕ್ಷದವರನ್ನ ಜೊತೆಯಲ್ಲಿ ಇಟ್ಕೊಂಡು ಪಕ್ಷ ವಿರೋಧಿ ಹೇಳಿಕೆ ಕೊಡೋದು ಸರಿಯಲ್ಲ, ಕಾಂಗ್ರೆಸ್‌ನಲ್ಲಿ ಯಾರು ದೊಡ್ಡವರಲ್ಲ, ಹೈ ಕಮಾಂಡ್ ಬಿಟ್ಟು ಯಾರ ಹೇಳಿಕೆಯನ್ನು ನಾವು ಪರಿಗಣಿಸಲ್ಲ. ಹರಿಪ್ರಸಾದ್ ಅವರದ್ದು ವೈಯಕ್ತಿಕ ಹೇಳಿಕೆ, ಕಾಂಗ್ರೆಸ್‌ಗೆ ಯಾರೂ ಅನಿವಾರ್ಯ ಅಲ್ಲ ಎಂದು ಹೇಳಿದರು.
ಬಿಜೆಪಿ ಶಾಸಕ ಯತ್ನಾಳ್‌ಗೆ ಹರಿ ಪ್ರಸಾದ್‌ರನ್ನು ಹೋಲಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ, ಬೆಳಗ್ಗಾದ್ರೆ ಸಾಕು, ಸಿಎಂ ವಿರುದ್ಧ ಹೇಳಿಕೆ ಕೊಡ್ತಿದ್ರು, ಯತ್ನಾಳ್ ರನ್ನ ಏನಾದ್ರು ಪಕ್ಷದಿಂದ ಅಮಾನತು ಮಾಡಿದ್ರಾ? ಸಿಎಂ ಸ್ಥಾನಕ್ಕೆ ಎರಡು ಸಾವಿರ ಕೋಟಿ ಕೊಡಬೇಕು ಎಂದು ಯತ್ನಾಳ್ ಹೇಳಿದ್ರು ಕ್ರಮ ಕೈಗೊಂಡಿದ್ರಾ ? ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಬೇರೆಯವರ ತಟ್ಟೆಯಲ್ಲಿರುವ ನೊಣ ಓಡಿಸ್ತಾ ಇದ್ದಾರೆ ಎಂದು ಆಕ್ರೋಶಿಸಿದರು.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಬಿಜೆಪಿ ಜೆಡಿಎಸ್ ಒಳ ಒಪ್ಪಂದದ ಬಗ್ಗೆ ಮೊದಲಿನಿಂದಲೂ ಹೇಳ್ತಾ ಇದ್ವಿ, ಈಗ ಅದು ಬಹಿರಂಗವಾಗಿದ್ದು, ಸಿದ್ದರಾಮಯ್ಯ ಮಾತ್ರ ಅಲ್ಲ ನಾವೆಲ್ಲಾ ಶಾಸಕರು ಸಹ ಹೇಳಿದ್ವಿ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.