ಬೆಂಗಳೂರು: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ 2023-24 ನೇ ಸಾಲಿನ ವಿವಿಧ ಯೋಜನೆಗಳಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದ್ದಾರೆ. ನಗರದ ಕೆಎಂಡಿಸಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ.
ಬಳಿಕ ಮಾತನಾಡಿದ ಜಮೀರ್, ಎಲ್ಲಾ ಯೋಜನೆಗಳು ವೆಬ್ ಸೈಟ್ ಮುಖಾಂತರ ಬಳಕೆಗೆ ಸಿಗಲಿದೆ. ‘ಅರಿವು’ ವಿದ್ಯಾಭ್ಯಾಸ ಸಾಲ ಸಾಲ ಯೋಜನೆ, ‘ಸ್ವಾವಲಂಬಿ ಸಾಲ ಯೋಜನೆ’, ಶ್ರಮ ಯೋಜನೆ, ಶ್ರಮ ಶಕ್ತಿ, ( ವಿಶೇಷ ಮಹಿಳಾ ಯೋಜನೆ) ವೃತ್ತಿ ಪ್ರೋತ್ಸಾಹ ಯೋಜನೆ, ಗಂಗಾ ಕಲ್ಯಾಣ ಯೋಜನೆ, ವೈಯಕ್ತಿಕ ಕೊಳವೆ ಬಾವಿ ಯೋಜನೆ, ಸಮುದಾಯ ಆಧಾರಿತ ತರಬೇತಿ ಯೋಜನೆಗೆ ಚಾಲನೆ ನೀಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ‘ಮೊದಲೇ ಇವಕ್ಕೆ ದೇವರು-ದಿಂಡ್ರು ಮೇಲೆ ನಂಬಿಕೆ ಇಲ್ಲ, ಅದ್ಕೆ ಮಳೆಯೂ ಆಗ್ತಿಲ್ಲ’
ವಾಹನಗಳ ಖರೀದಿಗೆ ಸಾಲ ಸೌಲಭ್ಯ, ಜೊತೆಗೆ ಚಾಲಕ ಖಾಲಿ ಚಾಲಕನಾಗಿರಬಾರದು ಮಾಲೀಕನಾಗಬೇಕು ಎಂಬುದು ನಮ್ಮ ಧ್ಯೇಯ. ನಮ್ಮ ಇಲಾಖೆಯಲ್ಲೂ ಅಕ್ರಮ ಏನಾದ್ರೂ ಆಗಿದ್ಯಾ ಎಂಬುದನ್ನೂ ನೋಡುತ್ತೇನೆ. ಸ್ಲಂ ಬೋರ್ಡ್‌ನಲ್ಲಿ 8 ವರ್ಷಗಳಿಂದ ಮನೆಗಳನ್ನ ಕಟ್ಟಿಕೊಟ್ಟಿಲ್ಲ,ಕಳೆದ ಬಾರಿ ವಸತಿ ಸಚಿವರು ಮನೆ ಕೊಟ್ಟಿರುವುದಾಗಿ ಹೇಳಿದ್ದಾರೆ ಆದರೆ ಅದಕ್ಕೆ ದಾಖಲೆಗಳೇ ಇಲ್ಲ. 1 ಸಾವಿರ ಮನೆಗಳನ್ನೂ ಹಂಚಿಕೆ ಮಾಡಿಲ್ಲ ಎಂದು ಮಾಜಿ ಸಚಿವ ಸೋಮಣ್ಣ ವಿರುದ್ಧ ಕಿಡಿಕಾರಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.