ಬೆಂಗಳೂರು : ಇಂದು (ಆಗಸ್ಟ್ 23) ಸಂಜೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿರುವ ಚಂದ್ರಯಾನ-3ರ ಲ್ಯಾಂಡರ್ ಚಂದ್ರನ ಮೇಲ್ಮೈನ ಮೊದಲ ಫೋಟೋಗಳನ್ನು ರವಾನಿಸಿದೆ.
ಚಂದ್ರಯಾನ ಲ್ಯಾಂಡರ್ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಬಳಿಕ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಬಾಹ್ಯಾಕಾಶ ನಿಯಂತ್ರಣ ಕೇಂದ್ರ ಲ್ಯಾಂಡರ್ ಜೊತೆ ಸಂವಹನ ನಡೆಸುವಲ್ಲಿ ಸಫಲವಾಗಿದೆ.
ಲಂಭವಾಗಿ ಲ್ಯಾಂಡಿಂಗ್ ಆಗುವ ವೇಳೆ ಸೆರೆಹಿಡಿದ ನಾಲ್ಕು ಫೋಟೋಗಳನ್ನು ಲ್ಯಾಂಡರ್ ಇಸ್ರೋಗೆ ರವಾನಿಸಿದ್ದು, ಈ ಮೂಲಕ ತನ್ನ ಕಾರ್ಯಾಚರಣೆ ಆರಂಭಿಸಿದೆ.
ಚಂದ್ರಯಾನ -3ರ ಲ್ಯಾಂಡರ್ ಮಾಡ್ಯೂಲ್ ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಅನ್ನು ಒಳಗೊಂಡಿರುವ ಮಿಷನ್ ಅನ್ನು ಜುಲೈ 14ರಂದು ಉಡಾವಣೆ ಮಾಡಲಾಗಿತ್ತು. ಇದು ಬುಧವಾರ ಸಂಜೆ 5:45 ಕ್ಕೆ ಚಂದ್ರನ ಮೇಲ್ಮೈಗೆ ತನ್ನ ಅಂತಿಮ ಇಳಿಯುವಿಕೆಯನ್ನು ಪ್ರಾರಂಭಿಸಿತು. ಸಂಜೆ 6:04 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.