ಮೈಸೂರು: ಸರ್ಕಾರದಿಂದ ನೀಡಲಾದ ಅನ್ನಭಾಗ್ಯ ಯೋಜನೆಯನ್ನು ದುರುಪಯೋಗ ಮಾಡಿದ ಘಟನೆ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ನಡೆದಿದೆ.
ಅಪ್ರಾಪ್ತರ ಮೂಲಕ ಮನೆ ಮನೆಗೆ ತೆರಳಿ 15 ರಿಂದ 16 ರೂಪಾಯಿಗೆ ಅನ್ನಭಾಗ್ಯ ಅಕ್ಕಿ ಖರೀದಿ ಮಾಡಿ ಅದನ್ನು ದಂಧೆಕೋರರಿಗೆ 50 ರಿಂದ 60 ರೂಪಾಯಿಗೆ ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಅಕ್ಕಿಯನ್ನು ದಂಧೆಕೋರರು ಕಾಳಸಂತೆಯಲ್ಲಿ ಮಾರುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಅಪ್ರಾಪ್ತರೆಂಬ ಕಾರಣಕ್ಕೆ ಯಾರನ್ನು ಬಂಧಿಸಲಾಗಿಲ್ಲ.
ಇದನ್ನೂ ಓದಿ: ದೀಪಾವಳಿಗೆ 3 ಕೋಟಿ ಮದ್ಯ ಬಾಟಲಿ ಮಾರಾಟ, ದೆಹಲಿ ಸರ್ಕಾರಕ್ಕೆ ₹525 ಕೋಟಿ ಆದಾಯ!
ಎರಡು ತಿಂಗಳ ಹಿಂದೆ ಕೂಡ ಆಟೋದಲ್ಲಿ ಅನ್ನಭಾಗ್ಯ ಅಕ್ಕಿ ಸಾಗಾಣೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಆಟೋವನ್ನು ವಶಪಡಿಸಿಕೊಂಡಿದ್ದರು. ಮೈಸೂರಿನ ಎನ್ ಆರ್ ಮೊಹಲ್ಲಾ ಸೇರಿ ಹಲವು ಕಡೆ ಈ ದಂಧೆ ನಡೆಯುತ್ತಿದ್ದು, ಇದುವರೆಗೂ ಹಲವು ವಾಹನ ಪೊಲೀಸರ ವಶಕ್ಕೆ ಪಡೆಯಲಾಗಿದೆ.
ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ, ಈಗ ಸಾಕಷ್ಟು ಟೀಕೆಗಳಿಗೆ ಗುರಿಯಾಗುತ್ತಿದೆ. ಈಗ ಮುಖ್ಯಮಂತ್ರಿಯವರ ಊರಿನಲ್ಲೇ ಈ ರೀತಿಯ ಘಟನೆ ನಡೆಯುತ್ತಿರುವುದು ನಿಜಕ್ಕೂ ಶೋಚನೀಯವೇ ಸರಿ.
ಇದನ್ನೂ ಓದಿ: ಕುಮಾರಸ್ವಾಮಿಯಿಂದ ವಿದ್ಯುತ್ ಕಳ್ಳತನ: ವಿಡಿಯೋ ಸಹಿತ ಆರೋಪಿಸಿದ ಕಾಂಗ್ರೆಸ್
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.