ಬೆಂಗಳೂರು: ಬೆಂಗಳೂರಿನಲ್ಲಿ ಆಟೋ ಚಾಲಕರ ಸಂಘಟನೆಗಳ ಒಕ್ಕೂಟದಿಂದ ಮುಷ್ಕರ ನಡೆದಿದೆ. ಈ ಮಧ್ಯೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆಗೆ ತಯಾರಾಗಿದ್ದ ಆಟೋ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಮ್ಮ ಬೇಡಿಕೆ ಈಡೇರೋವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡ್ತೇವೆ ಎಂದಿದ್ದ ಚಾಲಕರ ಪ್ರತಿಭಟನೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಷ್ಕರದ ಹೆಸರಿನಲ್ಲಿ ಆಟೋ ಓಡಿಸದಿದ್ರೆ ನಮಗೆ ಕಷ್ಟ, ನಮ್ಮ ಜೀವನ ನಿರ್ವಹಣೆ ಆಗಬೇಕು ಅನ್ನೋದು ಕೆಲ ಆಟೋ ಚಾಲಕರ ಅಭಿಪ್ರಾಯವಾದ್ರೆ, ಮೆಟ್ರೋ ಆರಂಭವಾದಾಗಿನಿಂದ ಆಟೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಅನ್ನೋದು ಕೆಲವರ ಅಭಿಪ್ರಾಯ ವಾಗಿದೆ.
ನ್ಯಾಯಬದ್ಧವಾಗಿ ಸರ್ಕಾರಕ್ಕೆ ಕಳೆದ 60 ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ. ಆದರೆ, ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದರೂ ಸರ್ಕಾರ ಕ್ರಮಕೈಗೊಳ್ಳದೇ ಸುಮ್ಮನೆ ಕುಳಿತಿದೆ, ಕಾನೂನುಬಾಹಿರ ವೈಟ್‌ಬೋರ್ಡ್ ಟ್ಯಾಕ್ಸಿ ರದ್ದು ಮಾಡಬೇಕು, ರಾಪಿಡೋ ಸೇರಿದಂತೆ ವಿವಿಧ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಬೇಕು ಅಂತಾ ಸಮಯ ಸರ್ಕಾರಕ್ಕೆ ಸಮಯ ನೀಡಿದ್ದರೂ ಬೇಡಿಕೆ ಈಡೇರದ ಕಾರಣ ಆಟೋ ಸೇವೆ ಬಂದ್ ಮಾಡುತ್ತೇವೆ ಎಂದು ತಿಳಿಸಿದ್ದರು. ಅದರಂತೆ ಇಂದು ನಡೆದ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿಲ್ಲ