Monday, December 4, 2023
spot_img
- Advertisement -spot_img

ಕುಮಾರಣ್ಣನ ಬುಟ್ಟಿಯಲ್ಲಿ ಹಾವಿರುವ ಕಾರಣಕ್ಕೆ ಕಾಂಗ್ರೆಸ್ ಹೆದರುತ್ತಿದೆ: ಬಂಡೆಪ್ಪ ಖಾಶೆಂಪೂರ್

ಬೀದರ: ಸಮಯ ಬಂದಾಗ ಕುಮಾರಸ್ವಾಮಿಯವರು ಪೇನ್ ಡ್ರೈವ್ ಬಿಡುಗಡೆ ಮಾಡುತ್ತಾರೆ. ಅದು ಡೂಬ್ಲಿಕೆಟ್ ಪೇನ್ ಡ್ರೈವ್ ಅಲ್ಲ, ಅಸಲಿ ಇದೆ. ಬುಟ್ಟಿಯಲ್ಲಿ ಹಾವು ಇಲ್ಲದೆ ಇಷ್ಟೊಂದು ಹೆದರಿಕೆಯಿಂದ ಕಾಂಗ್ರೆಸ್ ನವರು ಮಾತನಾಡುತ್ತಾರೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ್ ಕಾಂಗ್ರೆಸ್‌ ಪಕ್ಷವನ್ನು ತಿವಿದಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಂಡೆಪ್ಪ ಖಾಶೆಂಪೂರ್, ಕುಮಾರಸ್ವಾಮಿಯವರಿಗೆ ಯಾವುದೇ ಒತ್ತಡವಿಲ್ಲ, ದಾಖಲೆ ಇಲ್ಲದೆ ಮಾತನಾಡುವುದೂ ಇಲ್ಲ. ಅಷ್ಟಕ್ಕೂ ಅವರು ಮಾತನಾಡಿದ್ದರೆ ಅದರ ಹಿಂದೆ ಒಂದು ದೊಡ್ಡ ಅರ್ಥವಿರುತ್ತದೆ. ಸಮಗ್ರವಾಗಿ ಅಧ್ಯಯನ ಮಾಡಿಕೊಂಡೇ ಮಾತನಾಡುತ್ತಾರೆ ಎಂದು ಕೈ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ : ‘ನೀವು ಹಗಲುಕಳ್ಳರು; ನನ್ನನ್ನು ಕರೆಂಟ್ ಕಳ್ಳ ಅನ್ನೋದನ್ನ ನಿಲ್ಲಿಸಿ’

ಕಾಂಗ್ರೆಸ್‌ಗೆ ಕುಮಾರಸ್ವಾಮಿ ವಿರುದ್ಧ ಆರೋಪಿಸಲು ಎಲ್ಲಿ ಏನು ಸಿಕ್ಕಿಲ್ಲಾ, ಮನೆಗೆ ವಿದ್ಯುತ್ ಕಳ್ಳತನ ಮಾಡಿದ್ದಾರೆಂದು ತಾವೇ ಆರೋಪಿಸಿರುವ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ. ಅವರ ಮನೆಯವರಿಗೂ ಕಂಬಕ್ಕೆ ವಿದ್ಯುತ್ ತಂತಿ ಹಾಕಿದ್ದು ಗಮನಕ್ಕೆ ಬಂದಿರಲಿಲ್ಲ. ಇದನ್ನು ನಾನು ಸಮರ್ಥನೆ ಮಾಡುವುದಿಲ್ಲ.

ಸ್ಪೀಕರ್‌ ಅವರಿಗೆ ಬಿಜೆಪಿವರು ನಮಸ್ಕರಿಸುತ್ತಾರೆ ಎಂಬ ಜಮ್ಮಿರ್ ಅಹ್ಮದ್ ಹೇಳಿಕೆಯನ್ನು ಖಂಡಿಸಿದ ಅವರು, ಸ್ಪೀಕರ್ ಸ್ಥಾನಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೆಲೆ ಕಟ್ಟಲಾಗಲು ಸಾಧ್ಯವಿಲ್ಲ. ಆದರೆ ಇದರಲ್ಲೂ ಜಾತಿ, ಧರ್ಮವನ್ನು ಎಳೆದು ತರುವುದು ಸರಿಯಲ್ಲ, ಒಬ್ಬ ಸಚಿವರಾಗಿ ಅವರಿಗೆ ಇದು ಶೋಭೆ ತರುವಂತದ್ದಲ್ಲ. ಆ ಸ್ಥಾನಕ್ಕೆ ನಾವು ನೀಡುವ ಗೌರವವಾಗಿದೆ ಎಂದು ನಯವಾಗಿಯೇ ತಿರುಗೇಟು ನೀಡಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles