ಮಂಡ್ಯ : ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ, ಪಾಂಡವಪುರ ತಾಲೂಕು ಕಚೇರಿ ಸ್ವಚ್ಛಮಾಡಿ, ಎಲ್ಲರ ಹುಬ್ಬೇರಿಸಿದ್ದಾರೆ.
ಇಂದು ಮಂಡ್ಯದ ಪಾಂಡವಪುರ ತಾಲೂಕು ಕಚೇರಿಗೆ ಶಾಸಕರು ಭೇಟಿ ಕೊಟ್ಟಿದ್ದು, ಈ ವೇಳೆ ತಾಲೂಕು ಕಚೇರಿ ಕಸದಿಂದ ತುಂಬಿಕೊಂಡಿತ್ತು. ಶುಚಿತ್ವ ಕಾಪಾಡದೇ ಇರೋದ್ರ ಜೊತೆಗೆ ದಾಖಲೆ ಜೋಡಣೆ ಸೇರಿ ಹಲವು ಲೋಪ ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ : ಜಿ20ಗೆ ನನಗೆ ಆಹ್ವಾನ ಬಂದಿಲ್ಲ : ಮಲ್ಲಿಕಾರ್ಜುನ ಖರ್ಗೆ
ಸ್ವಚ್ಛತೆ ಕಾಪಾಡದೇ ಗೋಡೌನ್ ಆಗಿದ್ದ ತಾಲೂಕು ಕಚೇರಿಯ ಕೆಲ ವಿಭಾಗವನ್ನು ಖುದ್ದು ಸಿಬ್ಬಂದಿಯೊಂದಿಗೆ ಸೇರಿಕೊಂಡು ಬಾಕ್ಸ್‌ಗಳನ್ನ ತೆರವುಗೊಳಿಸಿ ಸ್ವಚ್ಛಗೊಳಿಸಿದ್ದಾರೆ. ಜೊತೆಗೆ ತಾಲೂಕು ಕಚೇರಿ ಪ್ರತೀ ವಿಭಾಗದ ಕೋಣೆಗಳಲ್ಲಿ ಧೂಳು ಇರೋದನ್ನು ಗಮನಿಸಿದ ಶಾಸಕರು, ಸಂಪೂರ್ಣವಾಗಿ ಕ್ಲೀನ್ ಮಾಡಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.




ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.