ಶಿವಮೊಗ್ಗ : ಶಾಸಕ ತನ್ವೀರ್ ಸೇಠ್ಗೆ ಕಾಂಗ್ರೆಸ್ ನಾಯಕರು ಬುದ್ಧಿ ಹೇಳಲಿ. ಬೇಕಾದರೆ ಅಬ್ದುಲ್ ಕಲಾಂ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಲಿ. ಅದುಬಿಟ್ಟು ದೇಶದ್ರೋಹಿ ಟಿಪ್ಪು ಪ್ರತಿಮೆ ಮಾಡುವುದು ಎಷ್ಟು ಸರಿ ?ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಮೂರ್ತಿಗೆ ಅವಕಾಶ ಇಲ್ಲ. ತನ್ವೀರ್ ಸೇಠ್ ಎಲ್ಕೆಜಿ ವಿದ್ಯಾರ್ಥಿಯಂತೆ ಪಾಠ ಕಲಿಯಲಿ , ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರತಿಮೆ ನಿರ್ಮಾಣ ಮಾಡಿದರೆ ತನ್ವೀರ್ ದೇಶದ್ರೋಹಿ ಚಟುವಟಿಕೆಯ ಒಂದು ಭಾಗ ಆಗುತ್ತಾರೆ ತನ್ವೀರ್ ಸೇಠ್ ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ ಎಸ್ ಈಶ್ವರಪ್ಪ ತನ್ವೀರ್ ಸೇಠ್ ಈ ರೀತಿ ಹೇಳಿಕೆ ಕೊಟ್ಟಿದ್ದು ತಪ್ಪು. ಶಾಸಕ ತನ್ವೀರ್ ಸೇಠ್ ದೇಶದ ಜನರ ಕ್ಷಮೆಯಾಚಿಸಬೇಕು ಎಂದಿದ್ದಾರೆ.ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರೆ ನಿಜವಾದ ನಾಯಕನಾಗುತ್ತಾನೆ. ಸೋಲುವ ಭಯದಿಂದ ಕ್ಷೇತ್ರ ಬದಲಾವಣೆ ಮಾಡಬೇಡಿ. ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಡಿ. ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ವಾಗ್ದಾಳಿ ಮಾಡಿದ್ದಾರೆ. ಜನ ಅಭಿಮಾನದಿಂದ ಸಿದ್ದರಾಮಯ್ಯರನ್ನು ಕರೆಯಬಹುದು. ಯಾವ ಕ್ಷೇತ್ರದಲ್ಲಿ ಗೆಲುವು, ಸೋಲು ಕಂಡಿದ್ದಾರೆ, ಅದೇ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಿ ಗೆದ್ದು ತೋರಿಸಬೇಕು ಎಂದು ಹೇಳಿದರು.