Thursday, September 28, 2023
spot_img
- Advertisement -spot_img

ಅಮೇರಿಕಾದಲ್ಲಿ ಕೃಷಿ ಅಧ್ಯಯನ ನಡೆಸಿದ ಸವದಿ

ಚಿಕ್ಕೋಡಿ: ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರು ವಿದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಅಮೇರಿಕಾದಲ್ಲಿ ಬೀಡು ಬಿಟ್ಟಿರುವ ಸವದಿ, ಕೃಷಿ ಸಂಬಂಧ ಅಧ್ಯಯನ ನಡೆಸಿದ್ದಾರೆ.

ಅಮೇರಿಕಾ ದೇಶದಲ್ಲಿ ನೂತನ ತಾಂತ್ರಿಕತೆಯೊಂದಿಗೆ ಅಲ್ಲಿನ ರೈತರು ಕೈಗೊಂಡಿರುವ ಆಧುನಿಕ ಕೃಷಿ ಪದ್ಧತಿಯನ್ನು ಸವದಿ ವೀಕ್ಷಿಸಿದರು. ವಾಷಿಂಗ್ಟನ್ ಡಿಸಿಯಿಂದ ಅಮೆರಿಕಾದ ನಯಾನಗರಕ್ಕೆ ರಸ್ತೆ ಮಾರ್ಗವಾಗಿ ಪ್ರಯಾಣಿಸಿ, ಮಾರ್ಗ ಮಧ್ಯೆ ಇದ್ದ ರೈತರ ಕೃಷಿ ಜಮೀನುಗಳು, ಫಾರ್ಮ್‌ಗಳಿಗೆ ಭೇಟಿ ನೀಡಿದರು.

ಇದನ್ನೂ ಓದಿ: ‘ಅಧಿಕಾರ, ಹಣ ಇದ್ದರು ಮನುಷ್ಯನಿಗೆ ನೆಮ್ಮದಿ ಬೇಕು’ : ಡಿಕೆಶಿ

ಅಲ್ಲಿನ ರೈತರು ಬೆಳೆದಿದ್ದ ಮೆಕ್ಕೆಜೋಳ ಸೇರಿದಂತೆ ಇತರ ಬೆಳೆಗಳನ್ನು ಖುದ್ದು ವೀಕ್ಷಿಸಿದರು. ಕೃಷಿಯಲ್ಲಿ ಆರ್ಥಿಕ ಪ್ರಗತಿ ಹೊಂದಿರುವ ಅಮೇರಿಕಾ ರೈತರೊಂದಿಗೆ ಕೃಷಿಯಲ್ಲಿ ಅವರು ಅನುಸರಿಸುತ್ತಿರುವ ವೈಜ್ಞಾನಿಕ ವ್ಯವಸಾಯದ ಕುರಿತು ಲಕ್ಷ್ಮಣ ಸವದಿಯವರು ಸಮಾಲೋಚನೆ ನಡೆಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles