ಹಾಸನ : ಮೂಡಿಗೆರೆ ಶಾಸಕಿ ನಯನಾಮೋಟಮ್ಮ ಹಾಸನಾಂಬಾ ದೇವಿಯ ದರ್ಶನ ಪಡೆದಿದ್ದಾರೆ. ವಿಶೇಷ ಪೂಜೆ ಸಲ್ಲಿಸಿದ ಅವರು, ನಾಡಿನ ಒಳಿತಿಗೆ ಬೇಡಿಕೊಂಡಿದ್ದಾರೆ. ಹಾಸನಾಂಬಾ ದೇವಿಯ ಮುಂದೆ ನಯನಾ ಮೋಟಮ್ಮ ಧ್ಯಾನಸ್ಥರಾಗಿದ್ದಾರೆ. ಮೂಡಿಗೆರೆ ಶಾಸಕಿ ನಯನಾಮೋಟಮ್ಮ ಎರಡನೇ ಬಾರಿ ಹಾಸನಾಂಬ ದರ್ಶನ ಪಡೆದಿದ್ದಾರೆ. ಕೊನೆಯ ದಿನ ನನಗೆ ದೇವಿಯ ದರ್ಶನ ಮಾಡಲು ಸಿಕ್ಕಿದ್ದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.
ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ ತೆರೆ ಎಳೆದಿದ್ದು, ಇಂದು ಮಧ್ಯಾಹ್ನ 12 ಗಂಟೆ 30 ನಿಮಿಷಕ್ಕೆ ಜಿಲ್ಲಾಡಳಿತದ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಿದೆ. ಈ ಬಾರಿ ಹತ್ತು ಲಕ್ಷಕ್ಕೂ ಅಧಿಕ ಭಕ್ತರಿಂದ ದೇವಿಯ ದರ್ಶನ ಪಡೆದಿದ್ದಾರೆ.
ಅಂದಹಾಗೆ ಪುರೋಹಿತ ವರ್ಗ ಹಾಸನಾಂಬೆ ದೇಗುಲದ ಒಳಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಿದ್ದು, ಬಳಿಕ ದೇವಿಗೆ ಹಾಕಲಾಗಿದ್ದ ಒಡವೆಗಳನ್ನು ಬಿಚ್ಚಿಟ್ಟ ನಂತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ನಂತರ ಮುಂದಿನ ದೀಪಾವಳಿ ವೇಳೆಗೆ ದೇವಸ್ಥಾನದ ಬಾಗಿಲು ತೆಗೆಯಲಿದ್ದಾರೆ.
ಇದನ್ನೂ ಓದಿ: ‘ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು’ ಸೇವೆ ಬೆಳಗಾವಿಯವರೆಗೆ ವಿಸ್ತರಣೆ, ರೈಲ್ವೆ ಸಚಿವಾಲಯ ಆದೇಶ
ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಪ್ರತಿ ವರ್ಷ ಐದರಿಂದ ಆರು ಲಕ್ಷ ಭಕ್ತರು ಬರುತ್ತಿದ್ದರು. ಆದರೆ ಈ ಬಾರಿ ಸರಕಾರದ ಶಕ್ತಿ ಯೋಜನೆ ಉಚಿತ ಬಸ್ ಪರಿಣಾಮ 10 ರಿಂದ 12 ಲಕ್ಷ ಭಕ್ತರು ಆಗಮಿಸಿದ್ದರು ಎಂದು ಹೇಳಲಾಗ್ತಿದೆ.
ಪ್ರತಿವರ್ಷದಂತೆ ಈ ವರ್ಷದ ದೀಪಾವಳಿ ಸಮಯದಲ್ಲೂ ಹಾಸನಾಂಬೆ ದೇವಸ್ಥಾನದ ದರ್ಶನವನ್ನು ಭಕ್ತರು ಪಡೆದುಕೊಂಡಿದ್ದು, ಈ ಬಾರಿ ನವೆಂಬರ್ 2 ರಿಂದ ನವೆಂಬರ್ 15 ರವರೆಗೆ ಹಾಸನಾಂಬೆ ದೇವಾಲಯಕ್ಕೆ ಭಕ್ತರು ಭೇಟಿ ಕೊಟ್ಟಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.