ಹಾಸನ: ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ ಎಂ ಶಿವಲಿಂಗೇಗೌಡ ಭೀಮನ ಡೈಲಾಗ್ ಗಳನ್ನು ಹೊಡೆದು ಜನರ ಮನ ಗೆದ್ದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬಾಣಾವರ ಹೋಬಳಿಯ ಗಂಜಿಗೆರೆಪುರದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಕುರುಕ್ಷೇತ್ರ ಅಥವಾ ಧರ್ಮರಾಯನ ಪಟ್ಟಾಭಿಷೇಕ ಎಂಬ ನಾಟಕದಲ್ಲಿ ಶಾಸಕ ಶಿವಲಿಂಗೇಗೌಡರು ಭೀಮನ ಪಾತ್ರದ ಡೈಲಾಗ್ ಹೇಳಿದರು.
ಇದನ್ನೂ ಓದಿ: ʼಕಾವೇರಿʼ ಸಮಸ್ಯೆಗೆ ʼಮೇಕೆದಾಟು ಯೋಜನೆʼಯೊಂದೇ ಪರಿಹಾರ: ಡಿಕೆಶಿ
ಭೀಮನಂತೆಯೇ ಘರ್ಜಿಸಿದ ಶಾಸಕ ಶಿವಲಿಂಗೇಗೌಡ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶ್ರೀ ಲಕ್ಷ್ಮಿ ರಂಗನಾಥ ಕೃಪಾಪೋಷಿತ ನಾಟಕ ಮಂಡಳಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.