Monday, December 4, 2023
spot_img
- Advertisement -spot_img

ನಾನು ಕದ್ದು ಮುಚ್ಚಿ ಪಕ್ಷ ಬಿಟ್ಟು ಹೋಗಲ್ಲ: ಶಾಸಕ ಶಿವರಾಮ್ ಹೆಬ್ಬಾರ್

ಕಾರವಾರ: ನಾನು ಕದ್ದುಮುಚ್ಚಿ ಪಕ್ಷ ಬಿಟ್ಟು ಓಡಿ ಹೋಗಲು ಆಗುವುದಿಲ್ಲ. ಯಾವ ಕಾಲದಲ್ಲಿ ಮಾತನಾಡಬೇಕೋ ಆ ಕಾಲಕ್ಕೆ ನಾನು ಮಾತನಾಡುತ್ತೇನೆ ಎಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮಾತನಾಡುವ ಕಾಲಕ್ಕೆ ಮಾತನಾಡುತ್ತೇನೆ. ವೈಯುಕ್ತಿಕವಾಗಿ ಡಿ.ಕೆ ಶಿವಕುಮಾರ್ ನನಗೆ ಸ್ನೇಹಿತರು. ಎಸ್.ಟಿ ಸೋಮಶೇಖರ್ ರವರು ಕೂಡ ಈಗಲೂ ನನಗೆ ಸ್ನೇಹಿತರಾಗಿದ್ದಾರೆ. ಅವರನ್ನು ನಾನು ಸರ್ಕಾರದ ಕೆಲಸ ಇದ್ದಾಗ ಭೇಟಿಯಾಗುತ್ತಿರುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ‘ಸಿಎಂ ಕೆಸಿಆರ್ ನಂತೆ ಎಂದ ಪುತ್ರಿ; ಕುಟುಕಿದ ಕಾಂಗ್ರೆಸ್

ನಾನು ಕದ್ದುಮುಚ್ಚಿ ಪಕ್ಷ ಬಿಟ್ಟು ಓಡಿ ಹೋಗಲು ಆಗುವುದಿಲ್ಲ. ನಾನು ಎಲ್ಲದಕ್ಕೂ
ಕಾಲ ಬಂದಾಗ ಉತ್ತರ ಕೊಡುತ್ತೇನೆ. ನನ್ನ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಎಂದು ಅಭಿಪ್ರಾಯ ನೀಡಿದ್ದಾರೆ. ಅದು ಅವರ ಅಭಿಪ್ರಾಯ ಹಾಗೂ ನಿರ್ಧಾರವಾಗಿದೆ. ಆದರೆ ನನ್ನ ಅಭಿಪ್ರಾಯ ನನ್ನದು ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪದಗ್ರಹಣಕ್ಕೆ ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,
ವಿಜಯೇಂದ್ರ ಅವರ ಕಾರ್ಯಕ್ರಮಕ್ಕೆ ಭಾಗಿಯಾಗದವರ ದೊಡ್ಡ ಪಟ್ಟಿಯೇ ಇದೆ. ಬಹಳ ಮಂದಿ ನಾಯಕರು ಭಾಗಿಯಾಗಿಲ್ಲ. ಭಾಗಿಯಾಗದಿರುವವರು ವಿರೋಧಿಗಳು ಎಂದು ಅರ್ಥವೇ?
ನಾನು ಅವರನ್ನು ನಿನ್ನೆಯೇ ಅಭಿನಂದಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಐಎಎಸ್ ಅಧಿಕಾರಿಗಳು ರಾಜಕೀಯ ಹಿತಾಸಕ್ತಿಯ ಪರ ಕೆಲ್ಸ ಮಾಡ್ಬಾರ್ದು: ಸಚಿವ ಮಹದೇವಪ್ಪ

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles