ವಿಜಯಪುರ: ವಿಜಯಪುರದಿಂದ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದು ನಿಜ. ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನೆ ಎಂದು ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಲ್ಲ, ಕಾಂಗ್ರೆಸ್ನಲ್ಲೇ ಇರುವೆ, ವರಿಷ್ಠರು ವಿಜಯಪುರ ನಗರ ಟಿಕೆಟ್ ಕೊಟ್ಟರೆ ಅಲ್ಲೂ ಸ್ಪರ್ಧಿಸುವೆ ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ಸ್ಪರ್ಧೆಗೆ ಸಿದ್ಧ ಎಂದು ವಿವರಿಸಿದರು.
ಬಬಲೇಶ್ವರ, ಕ್ಷೇತ್ರದ ಜನರು ಹಾಗೂ ಬೆಂಬಲಿಗರು ಸಹ ಅದನ್ನೇ ಬಯಸಿದ್ದಾರೆ. ಪಕ್ಷದ ವರಿಷ್ಠರಲ್ಲಿ ನಾನು ಏನಾದರೂ ಹೇಳಿಕೊಳ್ಳಬಹುದು. ಆದರೆ ಬಹಿರಂಗವಾಗಿ ನಾನು ಯಾವುದೂ ಹೇಳಲ್ಲ ಎಂದರು.ನಾನು ಮೊದಲೇ ಹೇಳಿದ್ದೇನೆ. ನನ್ನ ಪುತ್ರಿ ಅಥವಾ ಪುತ್ರನಾಗಲಿ ಅರ್ಜಿ ಹಾಕಬೇಡಿ ಎಂದು ಆದರೆ ಯುವ ಜನತೆ ಚಿಂತನೆ ಬೇರೆ ಇರುತ್ತದೆ. ವರಿಷ್ಠರು ಟಿಕೇಟ್ ನೀಡಿದರೆ ಸ್ಪರ್ಧಿಸಲಿ. ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.
ಈ ವೇಳೆ ಬಬಲೇಶ್ವರ ಕ್ಷೇತ್ರ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸುತ್ತಿರುವದು ಎಷ್ಟು ಸರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಚಾರ ಮಾಡಲಿ ಬಿಡಿ ನಾನು ಬಾಗೇವಾಡಿಯಲ್ಲಿ ಪ್ರಚಾರ ಮಾಡುತ್ತಿಲ್ಲ, ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ತಾನೇ ಎಂದರು.