ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಆಪರೇಷನ್ ಹಸ್ತ ಸಖತ್ ಸದ್ದು ಮಾಡ್ತಿದೆ. ಹಲವರು ಬಿಜೆಪಿಗರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಸದ್ಯ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಸೇರಲಿದ್ದಾರೆ ಅನ್ನೋ ವಿಚಾರ ಜೋರಾಗಿ ಕೇಳಿಬರುತ್ತಿದೆ.
ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಆಪರೇಷನ್ ಹಸ್ತವನ್ನು ಸ್ವಪಕ್ಷದವರೇ ಆದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ವಿರೋಧಿಸುತ್ತಿದ್ದಾರೆ. ಇದಕ್ಕೆ ಕಾರಣ ಸೇಠ್ ಅವರಿಗೆ ಕಾಡುತ್ತಿರುವ ಅಭದ್ರತೆ ಎಂಬ ಮಾತು ಕೇಳಿ ಬರುತ್ತಿದೆ.
ಇದಕ್ಕೆ ಕಾರಣ ಎಸ್.ಟಿ.ಸೋಮಶೇಖರ್ ಅವರು ಕಳೆದ ಸರ್ಕಾರದ ಅವಧಿಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿಯಾಗಿದ್ದರು. ಒಂದು ವೇಳೆ ಈಗ ಸೋಮಶೇಖರ್ ಅವರು ಮತ್ತೆ ಕಾಂಗ್ರೆಸ್‌ಗೆ ಬಂದರೆ, ಮೈಸೂರು ಭಾಗದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಬಹುದು. ಆಗ ತನ್ವೀರ್ ಸೇಠ್ ಅವರ ಹಿಡಿತ ಕೈತಪ್ಪಬಹುದು ಎನ್ನುವ ಅಭದ್ರತೆ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬಗ್ಗೆ ನಿಮಗೆಷ್ಟು ಗೊತ್ತು?
ಮತ್ತೊಂದೆಡೆ ಈಗಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರು ಕೂಡ ಕಾಂಗ್ರೆಸ್‌ಗೆ ಯಾರು ಬೇಕಾದರೂ ಬರಬಹುದು. ನಾವೇನ್ ಮನೆ ಮನೆಗೆ ಹೋಗಿ, ನೀವ್ ಬನ್ನಿ ಬನ್ನಿ ಅಂಥ ಕರೆಯುತ್ತಿಲ್ಲ. ನಮ್ಮ ಪಕ್ಷದ ಬಾಗಿಲು ತೆರೆದಿದೆ. ಮೈಸೂರಿನಲ್ಲಿ ಪಕ್ಷಕ್ಕೆ ಯಾರೇ ಬಂದ್ರೂ ಸ್ವಾಗತ. ಇನ್ನು ಎಸ್.ಟಿ.ಸೋಮಶೇಖರ್ ಅವರಿಗೆ ಎಲ್ಲವೂ ಗೊತ್ತಿದೆ ಎಂದು ಪಕ್ಷ ಸೇರ್ಪಡೆಯ ಸುಳಿವು ನೀಡಿದ್ದಾರೆ.
ಎಸ್ಟಿ ಸೋಮಶೇಖರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ವಿಚಾರವಾಗಿ ಮಾತನಾಡಿದ ತನ್ವೀರ್ ಸೇಠ್, ಅವರು ಕ್ಷೇತ್ರದ ಕೆಲಸದ ವಿಚಾರಕ್ಕೆ ಭೇಟಿಯಾಗಿದ್ದಾರೆ. ಪಕ್ಷ ಸೇರುವ ಉಹಾಪೋಹದ ವಿಚಾರಕ್ಕೆ ಸೋಮಶೇಖರ್ ಅವರೇ ಉತ್ತರ ಕೊಡಬೇಕು. ನಾವು ಯಾರಿಗೂ ಆಹ್ವಾನ ಕೊಟ್ಟಿಲ್ಲ. ಪಕ್ಷಕ್ಕೆ ಬರುವವರು ನಮ್ಮ ಬಳಿ ಮಾತನಾಡಿಲ್ಲ. ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದು ಸೇಠ್ ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.