ಬೆಳಗಾವಿ : ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯಾ ಮುರಳೀಧರನ್ ಅವರು ಧಾರವಾಡದಲ್ಲಿ ಪ್ರಾರಂಭಿಸುತ್ತಿರುವ ತಂಪು ಪಾನೀಯ ಕಂಪನಿಯಲ್ಲಿ ಸ್ಥಳೀಯರಿಗೆ ಶೇ50 ರಿಂದ 60ರಷ್ಟು ಉದ್ಯೋಗ ನೀಡಬೇಕೆಂದು ಶಾಸಕ ವಿನಯ್ ಕುಲಕರ್ಣಿ ಒತ್ತಾಯಿಸಿದ್ದಾರೆ.
ಚನ್ನಮ್ಮನ ಕಿತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ಕಂಪನಿಯಲ್ಲಿ ನಮ್ಮ ಭಾಗದ ಜನರಿಗೆ ಉದ್ಯೋಗ ಒದಗಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ : ಸಮೀಕ್ಷೆಯಲ್ಲಿ ‘ಕಮಲ’ ಕಮಾಲ್; ಈಗ ಚುನಾವಣೆ ನಡೆದ್ರೆ ಮೋದಿ ಮತ್ತೆ ಅಧಿಕಾರಕ್ಕೆ!
ಒಂದು ವೇಳೆ ಉದ್ಯೋಗವನ್ನು ನೀಡದಿದ್ದಲ್ಲಿ, ನಾನೇ ಮುಂದೆ ನಿಂತು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದ ಅವರು ಈ ಹಿಂದೆ ಬೇರೆ ಕಂಪನಿಗಳ ವಿಚಾರದಲ್ಲಿ ಇದೇ ರೀತಿಯಾಗಿದೆ ಎಂದರು.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟು ಕೈಗಾರಿಕೆ ಪ್ರದೇಶವಿದೆ. ಇದಕ್ಕೆ ಉದಾಹರಣೆ ಎಂಬಂತೆ ಟಾಟಾ ಮಾರ್ಕೊಪೋಲೊ ಕಂಪನಿಯವರು ಮೊದಲು ಸ್ಥಳೀಯರನ್ನು ಕೆಲಸಕ್ಕೆ ಸೇರಿಸಿಕೊಂಡು ಬಳಿಕ ಏಕಾಏಕಿ ಕಾರ್ಮಿಕರನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂದು ಕಂಪನಿ ವಿರುದ್ಧ ಕಿಡಿ ಕಾರಿದರು.
ಒಬ್ಬ ರಾಜಕಾರಣಿಯಾಗಿ ನಮ್ಮಭಾಗದ ಯುವಕರಿಗೆ ಉದ್ಯೋಗದಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನನ್ನ ಕೆಲಸವಾಗಿದೆ. ಮುತ್ತಯ್ಯಾ ಮುರಳೀಧರನ್ ಅವರ ಕಂಪನಿಯನ್ನು ಧಾರವಾಡ ಜಿಲ್ಲೆಯಿಂದ ಹೊರಗಡೆ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಪರಿಸರವಾದಿಗಳನ್ನು ಕರೆದು ನಾನು ಮಾತನಾಡುವುದಾಗಿ ವಿನಯ್ ಕುಲಕರ್ಣಿ ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.