ಮೈಸೂರು: ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರಿಗೆ ಪದ್ಮಭೂಷಣ ಬರಲು ಪ್ರಧಾನಿ ನರೇಂದ್ರ ಮೋದಿ ಕಾರಣರಲ್ಲ. ಅವರ ಸಾಹಿತ್ಯ ಕೃಷಿ ಮತ್ತು ಬರವಣಿಗೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಭೈರಪ್ಪನವರಿಗೆ ಈ ವಯಸ್ಸಿನಲ್ಲಿ ಓಲೈಕೆ ಏಕೆ ಬೇಕು? ನಿಮಗೆ ಅಕ್ಟೋಬರ್‌ನಲ್ಲಿ ಜ್ಞಾನಪೀಠ ಪ್ರಶಸ್ತಿ ಸಿಗುತ್ತದೆ. ಅದಕ್ಕಾಗಿ ಓಲೈಕೆ ಸರಿಯಲ್ಲ. ಮೋದಿಯಿಂದ ಪ್ರಶಸ್ತಿ ಬಂದಿಲ್ಲ. ನಿಮ್ಮ ಬರವಣಿಗೆಗೆ, ಸಾಹಿತ್ಯ ಕೃಷಿಗೆ ಗೌರವ ಸಂದಿದೆ. ನಿಮ್ಮ ಈ ಹೇಳಿಕೆ ಪ್ರಶಸ್ತಿಗೆ ಅವಮಾನ ಮಾಡಿದಂತೆ. ನೀವು ಬರೆವಣಿಗೆ ಆರಂಭಿಸಿದಾಗ ಮೋದಿ ಎಲ್ಲಿದ್ದರು? ಅನ್ನುವುದೇ ಗೊತ್ತಿಲ್ಲ ಎಂದು ಕಿಡಿಕಾರಿದರು.
ಕಾಗಿನೆಲೆ ಶ್ರೀಗಳು ಮಾತನಾಡುವಾಗ ಸಿಎಂ ಬೊಮ್ಮಾಯಿ ಅವರು ಮೈಕ್ ಕಿತ್ತುಕೊಂಡ ಘಟನೆಯ ಬಗ್ಗೆ ನನಗೆ ಬೇಸರವಿದೆ.ಯಾವುದಾದರೂ ದೊಡ್ಡ ಸಮುದಾಯದ ಮಠದ ಶ್ರೀಗಳು ಮಾತನಾಡುವಾಗ ಈ ರೀತಿ ಮೈಕ್ ಕಸಿದು ಕೊಂಡಿದ್ದರೆ ಬಿಡುತ್ತಿದ್ದರಾ? ಎಂದು ಪ್ರಶ್ನಿಸಿದರು. ಮೋದಿ ಪ್ರಧಾನಿ ಆದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂತು.ಮೋದಿ ಪ್ರಧಾನಿ ಆಗದಿದ್ದರೇ ನನಗೆ ಪ್ರಶಸ್ತಿ ಬರ್ತಿರಲಿಲ್ಲ.ಲೇಖಕ ಸತ್ತೇ ಸಾಯುತ್ತಾನೆ, ಆದ್ರೆ, ಅವನ ಪುಸ್ತಕ ಎಂದೂ ಜೀವಂತ ಅಂತ ಭೈರಪ್ಪ ತಿಳಿಸಿದ್ದರು.
ಎಷ್ಟು ದಿನ ಪುಸ್ತಕ ಇರುತ್ತೋ ಅಲ್ಲಿವರೆಗೆ ಲೇಖಕ ಸದಾ ಜೀವಂತ .ನನ್ನ ಬರೆದ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ .ನನ್ನ ಕಾದಂಬರಿಗಳ ಮೂಲವೇ ಭಾರತದ ಸಂಸ್ಕೃತಿ ಎಂದು ಹೇಳಿದ್ದರು. ನಮ್ಮಲ್ಲಿ ಸಂವಿಧಾನ ಇದೆ, ಈ ದೇಶವನ್ನು ಸಂವಿಧಾನ ಕಾಪಾಡುತ್ತದೆ ಎಂದು ತಿಳಿಸಿದ್ದರು.