ಬೆಂಗಳೂರು: G20 ಶೃಂಗಸಭೆ ವತಿಯಿಂದ ನಡೆದ ‘ಗ್ಲೋಬಲ್ ಐಕಾನ್ ಪ್ರಶಸ್ತಿ’ಗೆ ವಿಧಾನ ಪರಿಷತ್ ಸದಸ್ಯರಾದ ಟಿ. ಎ. ಶರವಣ ಅವರು ಭಾಜನರಾಗಿದ್ದಾರೆ.


ಯುನೈಟೆಡ್ ಕಿಂಗ್‌ಡಂನ ಹೌಸ್ ಆಫ್ ಲಾರ್ಡ್ಸ್ ಸದಸ್ಯರಾದ ಲಾರ್ಡ್ ಸುಸಾನ್ ಕ್ರಾಮರ್ (MP) ಮತ್ತು ಭಾರತೀಯ ಮೂಲದ ಮೊದಲ UK ಮೇಯರ್ ಶ್ರೀ. ಸುನಿಲ್ ಚೋಪ್ರಾ ಅವರು ಟಿ. ಎ. ಶರವಣ ರಾಜಕೀಯ ಕ್ಷೇತ್ರದ ಸಾಧನೆ ಗುರುತಿಸಿ ಗ್ಲೋಬಲ್ ಐಕಾನ್ ಅವಾರ್ಡ್ ನೀಡಿ ಗೌರವಿಸಲಾಗಿದೆ.


ಈ ಕುರಿತು ಟ್ವೀಟ್ (ಎಕ್ಸ್) ಮಾಡಿ ಸಂತಸ ಹಂಚಿಕೊಂಡಿರುವ ಅವರು, ‘ಲಂಡನ್ UK ಸಂಸತ್ತಿನಲ್ಲಿ ಜಾಗತಿಕ ಆರ್ಥಿಕ ವೇದಿಕೆ G20 ಶೃಂಗಸಭೆಯಿಂದ ನಡೆಯುತ್ತಿರುವ ಗ್ಲೋಬಲ್ ಐಕಾನ್ ಪ್ರಶಸ್ತಿಗೆ ರಾಜಕೀಯ ಕ್ಷೇತ್ರದಲ್ಲಿ ನಾನು ಮಾಡಿರುವ ಸಾಧನೆಯನ್ನು ಗುರುತಿಸಿ ಆಯ್ಕೆ ಮಾಡಿ ಗೌರವಿಸಿರುವುದು ಅತ್ಯಂತ ಸಂತಸ ತಂದಿದೆ’ ಎಂದು ಬರೆದುಕೊಂಡಿದ್ದಾರೆ.


ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.