Wednesday, November 29, 2023
spot_img
- Advertisement -spot_img

ಕರ್ನಾಟಕ ಬಂದ್; ತಮಿಳುನಾಡು ಸಿಎಂ ಅಣಕು ವೈಕುಂಠ ಸಮಾರಾಧನೆ

ಬೆಂಗಳೂರು/ದೇವನಹಳ್ಳಿ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಇತ್ತ ದೇವನಹಳ್ಳಿಯಲ್ಲಿ ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ ನಡೆದಿದೆ.

ಈ ವೇಳೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರಿಗೆ ವೈಕುಂಠ ಸಮಾರಾಧನೆ ನೆರವೇರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಾಲಿನ್ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಸಲ್ಲಿಸಿ ವೈಕುಂಠ ಸಮಾರಾಧನೆ ನೆರವೇರಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಬಂದ್; 44 ವಿಮಾನ ಹಾರಾಟ ರದ್ದು, ಏರ್‌ಪೋರ್ಟ್ ಒಳಗೆ ಪ್ರವೇಶಿಸಿದ ಐವರು ವಶಕ್ಕೆ

ಕರವೇ ಕಾರ್ಯಕರ್ತರಿಂದ ಸ್ಟಾಲಿನ್ ಗೋರಿ ಕಟ್ಟಿಸಿ ಸ್ಟಾಲಿನ್ ಭಾವಚಿತ್ರ ಮುಂದೆ ಪ್ರತಿಭಟನೆ ನಡೆಸಿದ್ದು, ಈ ಕೂಡಲೇ ನೀರು ಬಿಡೋದನ್ನ ನಿಲ್ಲಿಸಿ ಎಂದು ಘೋಷಣೆಗಳ ಕೂಗಿದ್ದಾರೆ.

ಇತ್ತ ದೊಡ್ಡಬಳ್ಳಾಪುರದಲ್ಲಿ ಸರ್ಕಾರ ನಡೆ ಖಂಡಿಸಿ ಬೈಕ್ ರ‍್ಯಾಲಿ ನಡೆಸಲಾಗಿದೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ರಾಜ್ಯ ಸರ್ಕಾರ ಕಾವೇರಿ ನೀರು‌ ಹಂಚಿಕೆ ಪ್ರಾಧಿಕಾರದ ಮಾತು ಕೇಳಬಾರದು. ಕೂಡಲೇ ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles