ಕಲಬುರಗಿ: G20 ಗೆ ನನಗೆ ಆಹ್ವಾನ ಬಂದಿಲ್ಲ ಅದನ್ನು ನೀವು ಎಲ್ಲಾರೂ ನೋಡಿದ್ರಿ, ಈವಿಚಾರದಲ್ಲಿ ರಾಜಕೀಯ ಮಾಡಬಾರದಿತ್ತು ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2024 ರಲ್ಲಿ ನನ್ನ ಗುರಿ ಎಲ್ಲರನ್ನೂ ಒಂದುಗೂಡಿಸಿ ಚುನಾವಣೆಯಲ್ಲಿ ಗೆಲ್ಲೋದು, ರಾಜಕೀಯದಲ್ಲಿ ಧಾರ್ಮಿಕ ವಿಚಾರ ತರುವುದಿಲ್ಲ, ಬೇರೆ ವಿಷಯದಲ್ಲಿ ನಾನು ಮಾತನಾಡುವುದಿಲ್ಲ…ಇಂಡಿಯಾ ಎಂದರೆ ಭಾರತ, ಭಾರತ ಎಂದು ಸಂವಿಧಾನದಲ್ಲಿ ಇಲ್ವಾ?…ಸಂವಿಧಾನದಲ್ಲಿದೆ, ಅವರನ್ನು ಯಾರು ಬೇಡ ಅಂತ ಅಂದಿದ್ದಾರೆ ಎಂದು ಗೊತ್ತಿಲ್ಲ ಕಿಡಿಕಾರಿದರು.
ಈ ರೀತಿಯಾಗಿ ಹೇಳುವರು ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ, ಮೇಕ್ ಇನ್ ಇಂಡಿಯಾ, ಇವು ಎಲ್ಲಾ ಯಾಕೆ ಹೇಳುತ್ತಾರೆ, ಇಂತಹ ವಿಷಯಗಳನ್ನು ತಂದು ಗೊಂದಲ ಸೃಷ್ಟಿಸಿ ಮಾತನಾಡಬಾರದು ಎಂದರು.
ರೈಲ್ವೆ ಯೋಜನೆ ಮತ್ತು ರೈಲು ಕುರಿತು ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಬಿಜೆಪಿಗೆ ನಮ್ಮ ಭಾಗದಲ್ಲಿ ಅಭಿವೃದ್ಧಿ ಮಾಡುವ ಭಾವನೆ ಇಲ್ಲ, ನಮ್ಮ ಸರ್ಕಾರ ಕೇಂದ್ರದಲ್ಲಿ ಆಡಳಿತದಲ್ಲಿ ಇದ್ದಾಗ ಪಾರ್ಟಿ ನೋಡಿಲ್ಲ, ಹುಬ್ಬಳಿ ಟು ಹೈದ್ರಾಬಾದ್, ಸೋಲಾಪುರ ಬೆಂಗಳೂರು, ಮೈಸೂರು ಟು ಅಜ್ಮೀರ್, ವಾರಣಾಸಿ ರೈಲು ನಮ್ಮ ಅವಧಿಯಲ್ಲಿ ಮಾಡಿಕೊಟ್ಟಿದ್ದೇವೆ ನಾವು ಪಾರ್ಟಿ ನೋಡಿ ಮಾಡಿದ್ದೇವಾ? ಎಂದು ಪ್ರಶ್ನಿಸಿದರು.
ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್ ಒಂದಾಗುವ ಸಾಧ್ಯತೆ ಇದೆ, ನೋಡೋಣ ಮುಂದೆ ಏನಾಗುತ್ತೆ, ಶೇ, 60 ರಷ್ಟು ಮತಗಳು ವಿರೋಧ ಪಕ್ಷದಲ್ಲಿದೆ ಶೇ,40 ರಷ್ಟು ಎನ್ ಡಿಎ ಗೆ ಸಿಕ್ಕಿದೆ, ಎಲ್ಲಾ ದೇಶದ ನಾಯಕರನ್ನು ಕರೆದು ನಾವು ಮಿಟಿಂಗ್ ಮಾಡಿದ್ದೇವೆ.
ಲಕ್ನೋ, ಬೆಂಗಳೂರು, ಮಹಾರಾಷ್ಟ್ರದಲ್ಲಿ ನಾವು ಮೀಟಿಂಗ್ ಮಾಡಿದ್ದೇವೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.