ಮಳಖೇಡ : ಪ್ರಧಾನಿ ನರೇಂದ್ರ ಮೋದಿ ಮಳಖೇಡದಲ್ಲಿ 52,072 ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ್ದರು. ಅಂದಹಾಗೆ ಈ ಕಾರ್ಯಕ್ರಮ ಈಗ ಗಿನ್ನೆಸ್ ವಲ್ಡ್ ರೆಕಾರ್ಡ್ ಸೇರಿದ್ದು, ತಂಡ ರಾಜ್ಯ ಸರ್ಕಾರಕ್ಕೆ ವೇದಿಕೆ ಮೇಲೆಯೇ ಪ್ರಮಾಣ ಪತ್ರ ನೀಡಿದೆ.
ಸರ್ಕಾರದ ಪರ ಕಂದಾಯ ಸಚಿವ ಅಶೋಕ್, ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಪ್ರಮಾಣ ಪತ್ರ ಸ್ವೀಕರಿಸಿದರು. ಗಿನ್ನೆಸ್ ವಲ್ಡ್ ರೆಕಾರ್ಡ್ ಕರ್ನಾಟಕ ವಿಭಾಗದ ಉಪಾಧ್ಯಕ್ಷೆ ವಸಂತ ಕವಿತಾ ಪಾಲ್ಗೊಂಡು ಕಲಬುರಗಿ ಜಿಲ್ಲಾಡಳಿತ ಕೋರಿಕೆಯಂತೆ ನಮ್ಮ ತಂಡ ಕಳೆದ 3 ತಿಂಗಳಿನಿಂದ 5 ಜಿಲ್ಲೆಗಳ ಡಿಸಿ ಕಚೇರಿಯಿಂದ ದಾಖಲೆ ಪಡೆದು ಪರಿಶೀಲಿಸಿ ಇಂದು ದಾಖಲೀಕರಣ ಮಾಡಿದ್ದೇವೆ ಎಂದರು.
ಡಬಲ್ ಎಂಜಿನ್ ಸರ್ಕಾರದಿಂದಾಗಿ ದೇಶದ ಅಭಿವೃದ್ಧಿ ಸಾಧ್ಯ. ಈ ಭಾಗದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ಶ್ರಮಿಸುತ್ತಿದೆ. ಹಿಂದುಳಿದ ಭಾಗ ಮುಂದುವರೆಯುವಂತೆ ಮಾಡಿದೆ. ಯಾದಗಿರಿ ಜಿಲ್ಲೆ ಮಹತ್ವಾಕಾಂಕ್ಷಿ ಜಿಲ್ಲೆ. ಭಾಷಣದ ಆರಂಭದಲ್ಲಿ ಸುರಪುರ ಸಂಸ್ಥಾನದ ರಾಜಾ ವೆಂಕಟಪ್ಪ ನಾಯಕರ ಸ್ವಾತಂತ್ರ್ಯ ಹೋರಾಟ ನೆನೆದ ಮೋದಿ, ಯಾದಗಿರಿ ಐತಿಹಾಸಿಕ ಜಿಲ್ಲೆ. ಇಲ್ಲಿನ ಬಸವ ಸಾಗರ ಜಲಾಶಯದ ಎಡದಂಡೆ ಕಾಲುವೆ, ಸ್ಕಾಡಾ ವ್ಯವಸ್ಥೆ, ಕುಡಿಯುವ ನೀರು, ರಸ್ತೆ ಮುಂತಾದವುಗಳು ಅಭಿವೃದ್ಧಿಯ ಸಂಕೇತ ಎಂದರು.