ನವದೆಹಲಿ: ಕರ್ನಾಟಕದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯಾಗಿ ಆಚರಿಸಿದರೆ, ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ, ಆಂಧ್ರಪ್ರದೇಶದಲ್ಲಿ ಮಕರ ಸಂಕ್ರಾಂತಿ ಪೊಂಗಲ್ ಹಬ್ಬ ಮತ್ತು ಅಸ್ಸಾಂನಲ್ಲಿ ಮಗ್ ಬಿಹು ಆಗಿ ಆಚರಿಸುತ್ತಾರೆ. ಹಾಗಾಗಿ ಈ ಎಲ್ಲಾ ರಾಜ್ಯಗಳಿಗೂ ಮೋದಿ ಶುಭಾಶಯ ಕೋರಿದ್ದಾರೆ.
ಸಂಕ್ರಾಂತಿ ಶುಭಾಶಯಗಳನ್ನು ಟ್ವೀಟ್ ಮಾಡಿರುವ ಅವರು, ಮಕರ ಸಂಕ್ರಾಂತಿಯ ವಿಶೇಷ ಸಂದರ್ಭದಲ್ಲಿ ಶುಭಾಶಯಗಳು. ಇದೊಂದು ವಿಶೇಷವಾದ ಹಬ್ಬ. ಇದು ಪ್ರತಿಯೊಬ್ಬರ ಜೀವನದಲ್ಲಿ ಆನಂದ ಮತ್ತು ಉತ್ತಮ ಆರೋಗ್ಯ ತರಲಿ ಎಂದು ನಾನು ಆಶಿಸುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಸಂಕ್ರಾಂತಿಯನ್ನು ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ.
ದೇಶಾದ್ಯಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಸೂಚಿಸುವ ವಿವಿಧ ಹೆಸರಿನಲ್ಲಿ ಹಬ್ಬವನ್ನು ಆಚರಿಸುತ್ತೇವೆ. ಈ ಎಲ್ಲಾ ಹಬ್ಬಗಳಿಗೆ ನನ್ನ ಶುಭಾಶಯಗಳು ಎಂದು ಮಕರ ಸಂಕ್ರಾಂತಿ, ಉತ್ತರಾಯಣ, ಭೋಗಿ, ಮಘ ಬಿಹು ಮತ್ತು ಪೊಂಗಲ್ ಅನ್ನು ಉಲ್ಲೇಖಿಸಿ ಶುಭ ಕೋರಿದ್ದಾರೆ.