ಬೆಂಗಳೂರು: ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸುವಾಗ ಪ್ರಧಾನಿ ಮೋದಿ ಭಾವುಕರಾಗಿದ್ದಾರೆ. ಇಲ್ಲಿನ ಪೀಣ್ಯ ಕಚೇರಿಯಲ್ಲಿ ವಿಜ್ಞಾನಿಗಳ ಸಾಧನೆ ಉದ್ದೇಶಿಸಿ ಭಾಷಣ ಆರಂಭಿಸಿದಾಗ ಕ್ಷಣ ಕಾಲ ಭಾವುಕರಾದರು.
ಭಾರತ ಚಂದ್ರನ ಮೇಲೆ ಇಳಿದಿದೆ. ಯಾರು ತಲುಪದ ಸ್ಥಳ ತಲುಪಿದ್ದೇವೆ. ಹಿಂದೆ ಯಾರು ಮಾಡಿರದ ಕಾರ್ಯ ಮಾಡಿದ್ದೇವೆ. ಇದು ಇಂದಿನ ಭಾರತ. ಇದು ಹೊಸ ಆಲೋಚನೆಯನ್ನು ವಿನೂತನ ರೀತಿ ಯೋಚಿಸುವ ಭಾರತವಾಗಿದೆ. ಚಂದ್ರಯಾನ್ ಟನ್‌ಡೌನ್ ಆದ ಕ್ಷಣದ ದೃಶ್ಯ ಯಾರು ತಾನೆ ಮರೆಯುತ್ತಾರೆ. ಆ ಕ್ಷಣ ನನ್ನಲ್ಲೂ ಅಮರವಾಗಿರಲಿದೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.