ಗದಗ : ಬಿಜೆಪಿ ರಾಜ್ಯ ಮುಖಂಡರನ್ನ ನೋಡೋಕೇ ಮೋದಿಯವರಿಗೆ ಅಸಡ್ಡೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಪ್ರಧಾನಿ ಮೋದಿ ವಿಸಿಟ್ ವೇಳೆ ರಸ್ತೆ ಬದಿ ನಿಂತ ಬಿಜೆಪಿ ನಾಯಕರ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ಮೋದಿಯವರು ನೋಡ್ಲಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷರು ಬೀದಿಯಲ್ಲಿ ನಿಂತಿದ್ರು.. ಆದ್ರೆ ಅವ್ರು ಇವ್ರನ್ನ ತಿರುಗಿಯೂ ನೋಡ್ಲಿಲ್ಲ.. ಇವ್ರಿಗಾದ್ರೂ ಸ್ವಾಭಿಮಾನ ಇರ್ಬೇಕಲ್ವಾ..? ಮೋದಿ ಕಾರ್ಯಕ್ರಮ ಯಾರು ಬರಬೇಡಿ ಅಂತಾ ಅವ್ರೆ ಹೇಳಿದ್ರು..ಅದಕ್ಕೆ ನಮ್ಮವರು ಯಾರೂ ಹೋಗಿರಲಿಲ್ಲ.. ಬಿಜೆಪಿಯವರು ಹೋಗಿದ್ರು.. ಆದ್ರೆ ಮೋದಿಯವರನ್ನ ಕಣ್ಣು ತಿರುಗಿಸಿಯೂ ಅವ್ರನ್ನ ನೋಡ್ಲಿಲ್ಲ.. ಮೋದಿಯವರನ್ನ ಕರೆಸಿ ಬೀದಿ ಬೀದಿ ಓಡಾಡ್ಸಿ ಮಾನ ಮರ್ಯಾದೆ ತೆಗೆದ್ರು.. ಎಂದು ವ್ಯಂಗ್ಯವಾಡಿದರು.
ಕೋವಿಡ್ ಅಕ್ರಮ ತನಿಖೆ ಬಗ್ಗೆ ಆಯೋಗ ರಚನೆ ಬಗ್ಗೆ ಮಾತನಾಡಿ, ಸಾರ್ವಜನಿಕ ಲೆಕ್ಕ ಪತ್ರ ವರದಿಯನ್ನ ಹಿಂದಿನ ಸರ್ಕಾರ ಸದನಕ್ಕೆ ಒಪ್ಪಿಸಿರಲಿಲ್ಲ, ವರದಿ ಆಧಾರದಲ್ಲಿ ಹಾಗೂ ಬೇರೆ ಬೇರೆ ಮಾಹಿತಿ ಆಧಾರದ ಮೇಲೆ ತನಿಖೆ ಆಗ್ಬೇಕು ಅಂತಾ ಕೋರಿದ್ದೆವು..ರಿಟೈರ್ಡ್ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ ಎಂದರು. ದ್ವೇಷದ ರಾಜಕಾರಣ ಮಾಡುತ್ತಿಲ್ಲ.. ಈ ಹಿಂದೆ ಆರೋಪ ಮಾಡಿರುವ ಪ್ರಕಾರ ಈಗ ತನಿಖೆ ನಡೆಸಿದ್ದೇವೆ, ಅವರಿಗೆ ಭಯ ಏಕೆ.. ತನಿಖೆಯನ್ನ ವಿರೋಧ ಪಕ್ಷಗಳು ಸ್ವಾಗತಿಸಬೇಕು ಎಂದು ಹೇಳಿದರು.
ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು, ಆರೋಪ ಮಾಡಿ ಸುಮ್ಮನಾಗೋದಲ್ಲ.. ಹೇಳಿದಂತೆ ತನಿಖೆ ಮಾಡಿಸುತ್ತಿದ್ದೇವೆ, 40 ಪರ್ಸೆಂಟೇಜ್, ಬಿಬಿಎಂಪಿ ಹಗರಣಗಳ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ, ಮನೆ ಮನೆಗೆ ತೆರಳಿ ಚಿಕಿತ್ಸೆ ನಡೆಸುವ ಬಗ್ಗೆ ಚಿಂತನೆ ನಡೆದಿದೆ, ಇನ್ನೆರಡು ತಿಂಗಳಲ್ಲಿ ಸ್ಪಷ್ಟ ಚಿತ್ರಣ ಮುಂದಿಡುತ್ತೇನೆ ಎಂದು ವಿವರಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.