ಶಿವಮೊಗ್ಗ: ನಮ್ಮ ದೇಶ ಜಗತ್ತಿನಲ್ಲಿ ಬಹಳ ಮುಂದಕ್ಕೆ ಹೋಗಿದೆ, ವಿಜ್ಞಾನದಲ್ಲೂ ಭಾರತ ಮುಂದುವರಿದಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ನವ್ರು ಬಿಜೆಪಿಯವರು ಬೀದಿಗೆ ಬಂದಿದ್ದಾರೆಂದು ಹೇಳಲಿ, ಲೋಕಸಭೆಯಲ್ಲಿ ಯಾರು ಬೀದಿಗೆ ಬರ್ತಾರೆ ಅಂತಾ ಲೋಕಸಭೆ ಚುನಾವಣೆಯಲ್ಲಿ ತೋರಿಸ್ತೀವಿ ಎಂದರು. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಮೋದಿ ಪ್ರಧಾನಿ ಆಗುವುದೂ ಅಷ್ಟೇ ಸತ್ಯ ಎಂದು ಅಭಿಪ್ರಾಯಪಟ್ಟರು.
ಯಾರೊಬ್ಬ ಎಂ.ಎಲ್.ಎ. ಬಿಜೆಪಿಯಿಂದ ಹೋಗಿದ್ರೆ ತಿಳಿಸಿ, ಸೋಮಶೇಖರ್ ಕೂಡ ಹೋಗಲ್ಲ, ಹೋಗಿಲ್ಲ, ಜೆಡಿಎಸ್ ನಿಂದ ಹೋದವರ ಬಗ್ಗೆ ನಾನು ಹೇಳಲಾರೆ, ಅದು ಆ ಪಕ್ಷಕ್ಕೆ ಬಿಟ್ಟ ವಿಚಾರ, ಹಾವೇರಿಯಲ್ಲಿ ಪುತ್ರ ಕಾಂತೇಶ್ ಲೋಕಸಭೆ ಚುನಾವಣೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ಮಗ ಕಾಂತೇಶ್ ಏನು ಮೇಲಿಂದ ಇಳಿದು ಬಂದವನಾ? ಅವನು ಕೂಡಾ ಪಕ್ಷ ಏನು ನಿರ್ಧಾರ ಮಾಡುತ್ತಾರೋ ಹಾಗೆ ಕೆಲಸ ಮಾಡುತ್ತಾನೆ, ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಾಂತೇಶ್ ಸ್ಪರ್ಧೆ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾನೆ ಎಂದರು.
ಇದನ್ನೂ ಓದಿ: ʼಚಂದ್ರಯಾನ-3ʼ ಯಶಸ್ವಿಗೆ ರಾಷ್ಟ್ರ ನಾಯಕರ ಅಭಿನಂದನೆ
ಹಾವೇರಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಓಡಾಟ ನಡೆಸಿದ್ದಾನೆ, ಅಲ್ಲಿರುವ ಮಠಾಧೀಶರು ಕೂಡ ಆಶೀರ್ವಾದ ಮಾಡುವುದಾಗಿ ಹೇಳಿದ್ದಾರೆ, ಪಕ್ಷ ಟಿಕೆಟ್ ನೀಡಿದರೆ ಖಂಡಿತ ಸ್ಪರ್ಧೆ ಮಾಡುತ್ತಾನೆ, ಒಂದು ವೇಳೆ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇವೆ ಎಂದು ಹಾವೇರಿಯಲ್ಲಿ ಕಾಂತೇಶ್ ಸ್ಪರ್ಧೆಗೆ ಬಿ.ಸಿ ಪಾಟೀಲ್ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಬಿ.ಸಿ. ಪಾಟೀಲ್ ನನ್ನ ಆತ್ಮೀಯ ಸ್ನೇಹಿತರು ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.