Thursday, September 28, 2023
spot_img
- Advertisement -spot_img

ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆ ಕುರಿತು ಮೋದಿ ಕಳವಳ

ನವದೆಹಲಿ: ಹಿಂಸಾಚಾರವನ್ನು ಪ್ರಚೋದಿಸುವ ಖಲಿಸ್ತಾನ್ ಪರ ಉಗ್ರಗಾಮಿಗಳ ಚಟುವಟಿಕೆಗಳ ಕುರಿತು ಭಾರತ ಜಿ20 ಶೃಂಗಸಭೆಯಲ್ಲಿ ಕಳವಳ ವ್ಯಕ್ತಪಡಿಸಿದೆ. ಕೆನಡಾದಲ್ಲಿ ನಡೆದಿದ್ದ ಖಲಿಸ್ತಾನ್ ಬೆಂಬಲಿಗರಿಂದ ದೇವಾಲಯ ದಾಳಿಗೂ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಜಿ20 ಶೃಂಗಸಭೆ ವೇಳೆ ಕೆನಾಡದಲ್ಲಿ ನಡೆಯುತ್ತಿರುವ ಖಲಿಸ್ತಾನ್ ಘರ್ಷಣೆಯಲ್ಲಿ ವಿದೇಶಿ ಹಸ್ತಕ್ಷೇಪ ಕುರಿತು ಪ್ರಸ್ತಾಪಿಸಲಾಗಿದೆ.

ಜಿ-20 ಶೃಂಗಸಭೆಯ ಮುಕ್ತಾಯದ ನಂತರ ನಡೆದ ಸಭೆಯಲ್ಲಿ, ಕೆನಡಾದಲ್ಲಿ ಭಾರತ-ವಿರೋಧಿ ಚಟುವಟಿಕೆಗಳನ್ನು ಮುಂದುವರೆಸುತ್ತಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನೆದರ್‌ ಲ್ಯಾಂಡ್‌ ಪ್ರಧಾನಿ ಸ್ವಾಗತಿಸಿದ ಡಿಕೆ ಶಿವಕುಮಾರ್

ಜಿ20 ಸಭೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪ್ರಧಾನಿ ಮೋದಿ ಅವರ ಬಳಿ ಉಭಯ ದೇಶಗಳ ಬಾಂಧವ್ಯಗಳ ಕುರಿತಂತೆ ಚರ್ಚಿಸಿದ್ದಾರೆ. ಜೊತೆಗೆ ಕೆನಡಾ ನೆಲದಲ್ಲಿ ಖಲಿಸ್ತಾನಿ ಚಟುವಟಿಕೆಗಳ ಹಿಂದೆ ವಿದೇಶಿ ಹಸ್ತಕ್ಷೇಪವಿರುವ ಬಗ್ಗೆ ಶಂಕೆ ಹೊರಹಾಕಿದ್ದಾರೆ. ಜೊತೆಗೆ ಖಲಿಸ್ತಾನಿ ಹೋರಾಟದ ನೆಪದಲ್ಲಿ ಭಾರತ ವಿರೋಧಿ ಕೃತ್ಯವನ್ನು ಹತ್ತಿಕ್ಕುತ್ತೇವೆ ಎಂದಿದ್ದಾರೆ.

ಈ ವರ್ಷದ ಆರಂಭದಲ್ಲಿ, ಕೆನಡಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೋಡಿ ಥಾಮಸ್ ಖಲಿಸ್ತಾನ್ ಹೋರಾಟಕ್ಕೆ ವಿದೇಶಿ ಹಸ್ತಕ್ಷೇಪವು ಪ್ರಮುಖ ಮೂಲಗಳಲ್ಲಿ ಒಂದಾಗಿದೆ ಎಂದಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬದಂದು ‘ಆಯುಷ್ಮಾನ್ ಭವ’ ಅಭಿಯಾನ!

ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿವೆ ಮತ್ತು ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತಿವೆ, ರಾಜತಾಂತ್ರಿಕ ಆವರಣಗಳನ್ನು ಹಾನಿಗೊಳಿಸುತ್ತಿವೆ ಮತ್ತು ಕೆನಡಾದಲ್ಲಿರುವ ಭಾರತೀಯ ಸಮುದಾಯ ಮತ್ತು ಅವರ ಪೂಜಾ ಸ್ಥಳಗಳಿಗೆ ಬೆದರಿಕೆ ಹಾಕುತ್ತಿವೆ ಎಂದು ಮೋದಿ ಈ ಕುರಿತ ಚರ್ಚೆ ವೇಳೆ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles