ಬೆಂಗಳೂರು: ರಾಜ್ಯ ನಾಯಕರ ಕುರಿತು ಅಸಮಾಧಾನ ಹೊಂದಿದ್ದ ಪ್ರಧಾನಿ ನರೇಂದ್ರ ಮೋದಿ ಇಂದೂ ಸಹ ಅವರ ಭೇಟಿಯಾಗದೆ ತೆರಳಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ನಾಯಕರ ಕಾರ್ಯದ ಮೇಲೆ ನರೇಂದ್ರ ಮೋದಿ ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದು, ನಾಯಕರ ನಡೆಯಿಂದ ಬೇಸರಗೊಂಡಿರುವ ಅವರು ಕಳೆದ ವಾರ ಕೇಂದ್ರ ಸಚಿವರೊಬ್ಬರ ಬಳಿ ಈ ಬಗ್ಗೆ ಪ್ರಸ್ತಾಪಿಸಿ ಅಸಮಾಧಾನ ಹೊರಹಾಕಿದ್ದರು.
ದಕ್ಷಿಣ ಭಾರತದಲ್ಲಿ ಗೆದ್ದುಕೊಂಡಿದ್ದ ಒಂದೇ ಒಂದು ರಾಜ್ಯ ಕಳೆದುಕೊಂಡಿದ್ದಲ್ಲದೆ ಚುನಾವಣೆ ವೇಳೆ ಸರಿಯಾಗಿ ಕೆಲಸ ಮಾಡದ ಹಿನ್ನೆಲೆ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಚುನಾವಣೆ ಸಂದರ್ಭದಲ್ಲಿ ಮೋದಿ ಅವರನ್ನು ಕರೆಸಿ ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆ ರೋಡ್ ಶೋ ಮಾಡಿಸಿದ್ದರು. ಆದರೆ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ನಾಯಕರು ವಿಫಲವಾಗಿದ್ದರಿಂದ ‘ನಾಟ್ ಇಂಟರೆಸ್ಟೆಡ್’ ಎಂಬ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಇಳಿದ ಸ್ಥಳ ಶಿವಶಕ್ತಿ ಕೇಂದ್ರ : ಪ್ರಧಾನಿ ಘೋಷಣೆ
ಬೆಂಗಳೂರಲ್ಲಿ ಬಿಜೆಪಿ ನಾಯಕರು ಅವರ ಭೇಟಿಗಾಗಿ ಪ್ರಯತ್ನಿಸಿದ್ದರು ಯಾವುದೇ ಉಪಯೋಗವಾಗಿಲ್ಲ. ಲೋಕಸಭೆ ಚುನಾವಣೆ ಸೇರಿ, ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಹುದ್ದೆ ಸಂಬಂಧ ಅವರಿಗೆ ವರದಿ ಮುಟ್ಟಿಸಲು ಕಾದಿದ್ದ ನಾಯಕರ ಭೇಟಿಯಾಗದೆ ದೆಹಲಿಗೆ ತೆರಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.