ಬೆಂಗಳೂರು: ಚಂದ್ರಯಾನ್-3 ಯೋಜನೆ ಯಶಸ್ವಿಯಾದ ಬೆನ್ನಲ್ಲೇ ಪೀಣ್ಯ ಬಳಿಯ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಈ ವೇಳೆ ಚಂದ್ರಯಾನ್-2 ವೇಳೆಯ ನೆನೆಪುಗಳು ಮತ್ತೆ ಮರುಕಳಿಸಿವೆ. ಚಂದ್ರಯಾನ್-2 ಯೋಜನೆಯಲ್ಲಿ ವಿಕ್ರಮ್ ಲ್ಯಾಂಡರ್ ಇಸ್ರೋ ಜೊತೆ ಸಂಪರ್ಕ ಕಡಿತಗೊಂಡಿದ್ದ ವೇಳೆ ಪ್ರಧಾನಿ ಮೋದಿ ವಿಜ್ಞಾನಿಗಳ ಸಮಾಧಾನಗೊಳಿಸಿದ್ದರು.
ಆಗಿನ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರನ್ನು ಪ್ರಧಾನಿ ಮೋದಿ ತಬ್ಬಿಕೊಂಡು ಸಮಾಧಾನಗೊಳಿಸಿದ್ದರು. ಯೋಜನೆ ವಿಫಲಗೊಂಡಿದ್ದರಿಂದ ಕಣ್ಣೀರಿಟ್ಟಿದ್ದ ಶಿವನ್ ಅವರನ್ನು ತಬ್ಬಿಕೊಂಡು ಸಮಾಧಾನಗೊಳಿಸಿದ್ದರು. ಪ್ರಧಾನಿ ಮೋದಿ ಅವರ ಈ ನಡೆಗೆ ಭಾರೀ ಮೆಚ್ಚುಗೆ ಕೇಳಿಬಂದಿತ್ತು. ಜೊತೆಗೆ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳ ಸಾಧನೆಯ ಉದ್ದೇಶಿಸಿ ಭಾಷಣ ಮಾಡಿ ಅವರ ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯ ಮಾಡಿದ್ದರು.
ಇದನ್ನೂ ಓದಿ: ಇಸ್ರೋ ವಿಜ್ಞಾನಿಗಳ ಸಾಧನೆಗೆ ಭಾವುಕರಾದ ಮೋದಿ
ಇದೇ ರೀತಿ ಇಂದು ಸಹ ಇಸ್ರೋಗೆ ಆಗಮಿಸಿದ ಅವರು, ಅಧ್ಯಕ್ಷ ಸೋಮನಾಥ್ ಅವರ ಬೆನ್ನು ತಟ್ಟಿ ಅಭಿನಂದಿಸಿದ್ದಾರೆ. ಕಚೇರಿ ಬಳಿ ಆಗಮಿಸುತ್ತಿದ್ದಂತೆ ವಿಜ್ಞಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಈ ವೇಳೆ ಅಧ್ಯಕ್ಷರು ಸೇರಿ ಯೋಜನೆಯ ಪ್ರಮುಖರನ್ನು ತಬ್ಬಿ ಬೆನ್ನು ತಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.