ಬೆಂಗಳೂರು : ಚಂದ್ರಯಾನ 3 ಯಶಸ್ವಿ ಸಾಧನೆ ಮಾಡಿರುವ ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸ್ತೇನೆ, ಚಂದ್ರಯಾನ 3 ನಮ್ಮ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಪ್ರಧಾನಿ ಮೋದಿ ವಿಜ್ಞಾನಿಗಳನ್ನ ಹುರಿದುಂಬಿಸಿದ್ರು, ಹಣವನ್ನು ಕೊಟ್ರು, ಭಾರತದ ತ್ರಿವರ್ಣ ಧ್ವಜವನ್ನು ಪ್ರಪಂಚದಾದ್ಯಂತ ಪಸರಿಸಿದ ಮೋದಿ 3 ನೇ ಭಾರಿ ಪ್ರಧಾನಿಯಾಗುವ ಕಾಲ ಹತ್ತಿರ ಬರ್ತಿದೆ, ಇಡೀ ಪ್ರಪಂಚಕ್ಕೆ ಮೋದಿಯವರ ನೇತೃತ್ವ ಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಪಂಚದಲ್ಲಿ ಸೌಹಾರ್ದತೆ, ಶಾಂತಿ, ಸ್ವಾವಲಂಬನೆ, ನೆರವಿಗೆ ಮೋದಿಯವರ ನೇತೃತ್ವ ಬೇಕು, ಇದಕ್ಕಾಗಿ ಮತ್ತೆ ಮೋದಿ ಅವರನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು. ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಜೆಪಿ ಅಭಿಯಾನ ಕೈಗೊಂಡಿದ್ದು, ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆಯುವ ಕೆಲಸ ಮಾಡಬೇಕು, ಇದಕ್ಕಾಗಿ ಬಿಜೆಪಿ ದೇಶಾದ್ಯಂತ ಅಭಿಯಾನ ಕೈಗೊಳ್ತಿದೆ, ಜಾತಿಯ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟಿರೋದು ನಾವು ನೋಡಿದ್ದೇವೆ, ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಕೆಲಸ ಮಾಡ್ತಿದೆ, ಇದಕ್ಕೆ ಬಿಜೆಪಿ ಸಹಕಾರ ಕೊಡ್ತಿದೆ , 18 ವರ್ಷ ಮೇಲ್ಪಟ್ಟವರನ್ನು ಪಟ್ಟಿಗೆ ಸೇರಿಸುವುದು, ನಿಧನ ಹೊಂದಿರುವವರನ್ನು ಗುರುತಿಸಿ ಪಟ್ಟಿಯಿಂದ ತೆಗೆಯುವುದು, ಸ್ಥಳ ಬದಲಾವಣೆ, 2 ವೋಟ್ ಇರುವುದು, ಸೇರಿ ಅಕ್ರಮ ಮತ ಪಟ್ಟಿಯ ಪರಿಷ್ಕರಣೆ ನಡೆಯಲಿದೆ ಎಂದು ವಿವರಿಸಿದರು.
ಇದನ್ನೂ ಓದಿ : ಕಾವೇರಿ ನದಿ ನೀರು ಹಂಚಿಕೆ ವಿವಾದ: ವಿಚಾರಣೆ ಮುಂದೂಡಿದ ಸುಪ್ರೀಂ!
BLA -2 ಅನ್ನು ನಮ್ಮ ಪಕ್ಷ ಚಾಲನೆ ಕೊಡಲಿದೆ, ರಾಜ್ಯದ 58,282 ಭೂತ್ ಗಳಲ್ಲೂ ಮತದಾನ ಪರಿಷ್ಕರಣೆ ನಡೆಯಲಿದೆ, 6,7,8 ನಿಯಮದಲ್ಲಿ ಸೆಪ್ಟೆಂಬರ್ 10 ರೊಳಗೆ ಮತದಾನ ಪರಿಷ್ಕರಣೆ ಮಾಡಬೇಕೆಂದು BJP ನಿರ್ಧರಿಸಿದೆ, ನನ್ನ ದೇಶಕ್ಕಾಗಿ ನನ್ನ ಮತ ಎಂಬ ಅಭಿಯಾನ ಬಿಜೆಪಿ ಆರಂಭಿಸಿದೆ, ಸೆಪ್ಟೆಂಬರ್ 17 ರಂದು ಮೋದಿಯವರ ಜನ್ಮದಿನದಂದು ಮನೆ-ಮನೆಗೆ ತೆರಳಿ ಮತದಾನ ಪರಿಷ್ಕರಣೆಯ ಅಭಿಯಾನ ಮಾಡ್ತೇವೆ, ಮನೆಯ ವಿಳಾಸ ಬದಲಾವಣೆ ಪ್ರಕ್ರಿಯೆ ಬದಲಾವಣೆಗೂ ನಾವು ಚಾಲನೆ ಕೊಡ್ತಿದ್ದೇವೆ, 2024 ರ ಚುನಾವಣೆಗೆ ಎಲ್ಲರೂ ಸಹಕರಿಸಿ ಅಂತ ಕೇಳ್ತೇನೆ ಎಂದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಮತದಾನ ನಮ್ಮೆಲ್ಲರ ಹಕ್ಕು ಹಾಗೂ ಕರ್ತವ್ಯ, ಸದೃಢ, ಸಶಕ್ತ ಹಾಗೂ ಸುಭದ್ರ ಸರ್ಕಾರದ ಆಯ್ಕೆ ನಮ್ಮ ಜವಾಬ್ದಾರಿ ಉತ್ತಮ ಮತದಾರರಿಂದಲೇ 2014ರಲ್ಲಿ ಸುಭದ್ರ ಹಾಗೂ ಸಶಕ್ತ ಸರ್ಕಾರ ರಚನೆ ಆಯಿತು,ಈ ಮತದಾನದಿಂದ ದೇಶದಲ್ಲಿ 50 ಕೋಟಿ ಜನಧನ ಖಾತೆ ತೆರೆಯಲು ಕಾರಣವಾಯಿತು ಎಂದು ಮೋದಿಯವರ ಆಡಳಿತವನ್ನು ಹೊಗಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.