ಹಾವೇರಿ: ಬಿ.ವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಆಗುವುದಕ್ಕಿಂತ, ಯೂಥ್‌ವಿಂಗ್ ನಲ್ಲಿ ಅಧ್ಯಕ್ಷ ಆಗಿದ್ದರೆ ನನಗೆ ಇನ್ನೂ ಸಂತೋಷ ಆಗ್ತಿತ್ತು ಎಂದು ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಯೂಥ್‌ವಿಂಗ್ ನಲ್ಲಿ ಅಧ್ಯಕ್ಷನಾಗಬೇಕಿತ್ತು. ಅವರ ಟೈಮ್ ಚೆನ್ನಾಗಿದೆ ಅದಕ್ಕೆ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ವ್ಯಂಗ್ಯವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ನಾನು ಕಲಿತ ಈ ಶಾಲೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ: ವಿಜಯೇಂದ್ರ
ವಿಜಯೇಂದ್ರ ಅವರ ಪಕ್ಷದ ವಿಚಾರ ನಮಗೆ ಬೇಕಾಗಿಲ್ಲ. ನಮ್ಮ ಪಕ್ಷದಲ್ಲಿ ಅವರಿಗಿಂತ ಹತ್ತು ಪಟ್ಟು ಸ್ಟ್ರಾಂಗ್ ಆಗಿರುವ ಅಧ್ಯಕ್ಷರಿದ್ದಾರೆ. ಒಮ್ಮೆ ಬಿಜೆಪಿಯವರನ್ನು ಮುಟ್ಟಿದ್ದಕ್ಕೆ 66 ಸ್ಥಾನಕ್ಕೆ ಬಂದಿದ್ದಾರೆ. ಇನ್ನು ಹತ್ರಕ್ಕೆ ಹೋದ್ರೆ 33 ಸ್ಥಾನಕ್ಕೆ ಇಳಿಯುತ್ತಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರು ಒಳ್ಳೆ ಆಡಳಿತ ಕೊಡ್ತಿದಾರೆ, ಶಾಡೋ ಸಿಎಂ ತರ ಯಾವ ವಿಚಾರವು ಇಲ್ಲ. ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಸಿಎಂ ಆಯ್ಕೆ ಮಾಡುತ್ತಾರೆ. ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೋ, ಆ ನಿರ್ಧಾರವನ್ನು ನಾವು ಪಾಲಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಸ್ಟಾಲಿನ್, ಡಿಎಂಕೆ ಸಚಿವರ ಕುರಿತು ಅವಹೇಳನಕಾರಿ ಪೋಸ್ಟ್: ಬಿಜೆಪಿ ನಾಯಕನ ಬಂಧನ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.