ಬೆಂಗಳೂರು : ಸರ್ಕಾರದ ಶಕ್ತಿ ಯೋಜನೆಯಿಂದ ಅಗುತ್ತಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಹಾಗೂ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಖಾಸಗಿ ಸಾರಿಗೆ ಒಕ್ಕೂಟದಿಂದ ಕರೆ ನೀಡಲಾಗಿರುವ ನಗರ ಬಂದ್‌ಗೆ ಬಿಜೆಪಿ ವತಿಯಿಂದ ನೈತಿಕ ಬೆಂಬಲ ನೀಡಲಾಗುತ್ತಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅವರು ನಡೆಸುತ್ತಿರುವ ಬಂದ್‌ಗೆ ನಾವು ನೈತಿಕವಾಗಿ ಬೆಂಬಲಿಸಲಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಖಾಸಗಿ ಸಾರಿಗೆ ಒಕ್ಕೂಟದ ಬಂದ್ : ಏರ್‌ಪೋರ್ಟ್ ಟ್ಯಾಕ್ಸಿಗೆ ಕಲ್ಲೆಸೆದ ಕಿಡಿಗೇಡಿಗಳು
ಹೆಚ್ಚಾಯ್ತು ಬಿಎಂಟಿಸಿಗೆ ಬೇಡಿಕೆ..
ನಗರದಲ್ಲಿಂದು ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿರುವ ಬಂದ್ ನಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಸೇವೆ ನೀಡಲು ಸಾರ್ವಜನಿಕರ ಜೀವನಾಡಿಯಂತಿರುವ ಬಿಎಂಟಿಸಿ ಮುಂದಾಗಿದೆ.
32 ಖಾಸಗಿ ಸಾರಿಗೆಗಳ ನಡೆಸುತ್ತಿರುವ ಬಂದ್‌ಗೆ ಸೆಡ್ಡು ಹೊಡೆದಿರುವ ಬಿಎಂಟಿಸಿ ಹೆಚ್ಚುವರಿ ಬಸ್‌ಗಳನ್ನು ರಸ್ತೆಗಳಿಸಲು ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ಗಳಿಗೆ ಈಗ ಎಲ್ಲೆಡೆ ವ್ಯಾಪಕ ಡಿಮ್ಯಾಂಡ್ ಬಂದಿದೆ. ನಗರದಲ್ಲಿರುವ ಎಲ್ಲ ಬಸ್ ನಿಲ್ದಾಣಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಬಸ್‌ಗಳ ವ್ಯವಸ್ಥೆಯನ್ನು ಮಾಡಿದೆ.
ಇದರಿಂದ ದಿನನಿತ್ಯ ಖಾಸಗಿ ಸಾರಿಗೆ ನಂಬಿಕೊಂಡಿದ್ದ ಪ್ರಯಾಣಿಕರಿಗೆ ಶಾಕ್! ಆಗಿದ್ದು, ಅವರೂ ಸಹ ಇಂದು ಅನಿವಾರ್ಯವಾಗಿ ಬಿಎಂಟಿಸಿ ಬಸ್‌ಗಳ ಮೊರೆ ಹೋಗುತ್ತಿದ್ದಾರೆ. ಅತೀ ಹೆಚ್ಚು ಪ್ರಯಾಣಿಕರು ಬಿಎಂಟಿಸಿ ಕಡೆಗೆ ಹರಿದು ಬರುವ ಸಾಧ್ಯತೆಯನ್ನು ಅರಿತಿರುವ ಅಧಿಕಾರಿಗಳು ಬಸ್ ಕಾರ್ಯಾಚರಣೆಯಲ್ಲಿ ಮಗ್ನರಾಗಿ, ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗಬಾರದೆಂದು ಪಣ ತೊಟ್ಟಿದ್ದಾರೆ.
ಬಂದ್ ನಿಂದ ಬಹುತೇಕ ಪ್ರಯಾಣಿಕರು ನಮ್ಮ ಮೆಟ್ರೋದ ಕಡೆಗೆ ಮುಖ ಮಾಡುತ್ತಿದ್ದಾರೆ. ಇದನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಲು ಬಿಎಂಆರ್‌ಸಿಎಲ್ ನಿಂದಲೂ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ತಯಾರಿ ನಡೆದಿದೆ.
ದಿನನಿತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಮೆಟ್ರೋ ಬಳಸಲಿರುವ ಹಿನ್ನೆಲೆ, ನಿರಂತರ ಮೆಟ್ರೋ ರೈಲುಗಳ ಟ್ರಿಫ್ ಕೈಗೊಳ್ಳಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.